ನ್ಯಾಶನಲ್ ಟಿ2 ಟ್ರಯಲ್ಸ್ ಮೆಹುಲಿ ಘೋಷ್ಗೆ ಚಿನ್ನ
mehul ghosh
ಭೋಪಾಲ್, ಮಾ.13: ನ್ಯಾಶನಲ್ ಟಿ2 ಟ್ರಯಲ್ಸ್ನಲ್ಲಿ ರವಿವಾರ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಪಶ್ಚಿಮ ಬಂಗಾಳದ ಮೆಹುಲಿ ಘೋಷ್ ಕರ್ನಾಟಕದ ತಿಲೋತ್ತಮ ಸೇನ್ರನ್ನು 17-9 ಅಂತರದಿಂದ ಸೋಲಿಸಿ ಚಿನ್ನದ ಪದಕ ಜಯಿಸಿದರು.
ಯೂತ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ವಿಜೇತೆ ಮೆಹುಲಿ ಶುಕ್ರವಾರ ಟಿ1 ಟ್ರಯಲ್ಸ್ ನಲ್ಲಿ ಎರಡನೇ ಸ್ಥಾನ ಪಡೆದಿ ದ್ದರು. ತಿಲೋತ್ತಮ ಜೂನಿಯರ್ ಮಹಿಳೆಯರ 10 ಮೀ. ಏರ್ ರೈಫಲ್ ಟಿ2 ಟ್ರಯಲ್ನಲ್ಲಿ ಜಯಶಾಲಿಯಾಗಿದ್ದು, ಯೂತ್ ಟಿ2 ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಶನಿವಾರ 630.1 ಅಂಕ ಗಳಿಸಿದ ಮೆಹುಲಿ ಆರನೇ ಸ್ಥಾನ ಪಡೆದು ಅಗ್ರ-8ರ ಹಂತಕ್ಕೆ ಅರ್ಹತೆ ಪಡೆದಿದ್ದರು. ಗುಜರಾತ್ನ ಎಲವೆನಿಲ್ ವಲರಿವನ್ 632.1 ಅಂಕ ಗಳಿಸಿ ಮೊದಲ ಸ್ಥಾನ ಪಡೆದರು. ರವಿವಾರ ನಡೆದ ಎರಡು ಸೆಮಿ ಫೈನಲ್ನಲ್ಲಿ ಮೆಹುಲಿ, ತಿಲೋತ್ತಮ ಹಾಗೂ ಎಲವೆನಿಲ್ ಜೊತೆಗೆ ಹರ್ಯಾಣದ ರಮಿತಾ ಕೂಡ ಸೇರಿಕೊಂಡರು. ಎಲವೆನಿಲ್ 37 ಅಂಕ ಗಳಿಸಿ ಕಂಚಿಗೆ ತೃಪ್ತಿಪಟ್ಟರು. ಮೆಹುಲಿ(48) ಹಾಗೂ ತಿಲೋತ್ತಮ ಪ್ರಶಸ್ತಿ ಸುತ್ತಿಗೆ ತೇರ್ಗಡೆಯಾದರು.
ಜೂನಿಯರ್ ಮಹಿಳಾ ಫೈನಲ್ನಲ್ಲಿ ತಿಲೋತ್ತಮ ಮಹಾರಾಷ್ಟ್ರದ ಆರ್ಯ ರಾಜೇಶ್ ಬೋರ್ಸೆ ಅವರನ್ನು ಎದುರಿಸಿದ್ದು, 17-5 ಅಂತರದಿಂದ ಜಯಶಾಲಿಯಾದರು.