ರಾಜಸ್ಥಾನ: ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ
ಜೈಪುರ: ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ ಮಕ್ಕಳೆದುರೇ ದಲಿತ ಮಹಿಳೆಯೋರ್ವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದಾಗಿ ಪೊಲೀಸರು ಗುರುವಾರ ತಿಳಿಸಿದ್ದಾರೆ.
ಆರೋಪಿಗಳನ್ನು ಲಾಲು ಠಾಕೂರ್, ಧಾನ್ ಸಿಂಗ್ ಠಾಕೂರ್, ವಿಪಿನ್ ಠಾಕೂರ್, ಮೋಹಿತ್ ಠಾಕೂರ್, ಸಚಿನ್ ಠಾಕೂರ್ ಹಾಗೂ ಲೋಕೇಂದ್ರ ಸಿಂಗ್ ಠಾಕೂರ್ ಎಂದು ಗುರುತಿಸಲಾಗಿದೆ.
ಸಂತ್ರಸ್ತೆ ಹಾಗೂ ದುಷ್ಕರ್ಮಿಗಳು ಒಂದೇ ಗ್ರಾಮಕ್ಕೆ ಸೇರಿದವರಾಗಿದ್ದು, ಮಂಗಳವಾರ ಮಹಿಳೆ ತನ್ನ ಪತಿ ಹಾಗೂ ಮಕ್ಕಳೊಂದಿಗೆ ಹೊಲದಿಂದ ಹಿಂದಿರುಗುತ್ತಿದ್ದಾಗ ಆರೋಪಿಗಳು ಅವರನ್ನು ತಡೆದು ನಿಲ್ಲಿಸಿ ಥಳಿಸಿದ್ದಾರೆ.
ದೇಶಿ ನಿರ್ಮಿತ ಪಿಸ್ತೂಲು ತೋರಿ ಬೆದರಿಸಿದ ಆರೋಪಿಗಳು ಸಂತ್ರಸ್ತೆಯ ಪತಿಯನ್ನು ಥಳಿಸಿ ಓಡಿಸಿದ್ದಾರೆ. ಅನಂತರ ಆರೋಪಿಗಳು ಬಂದೂಕು ತೋರಿಸಿ ಮಹಿಳೆಯನ್ನು ಮಕ್ಕಳ ಎದುರಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಂಚನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story