ವಿದ್ಯುತ್ ಕಂಬಕ್ಕೆ ಬಡಿದ ಸ್ಪೈಸ್ ಜೆಟ್ ವಿಮಾನ; ಅಪಾಯದಿಂದ ಪಾರಾದ ಪ್ರಯಾಣಿಕರು
Photo: ndtv.com
ಹೊಸದಿಲ್ಲಿ: ಜಮ್ಮುವಿಗೆ ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ವಿದ್ಯುತ್ ಲೈಟ್ ಕಂಭಕ್ಕೆ ಢಿಕ್ಕಿ ಹೊಡೆದ ಘಟನೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಪ್ರಯಾಣಿಕರ ಟರ್ಮಿನಲ್ ನಿಂದ ರನ್ವೇಗೆ ಹೋಗಲು ಪುಶ್ಬ್ಯಾಕ್ ನಡೆಸುವ ವೇಳೆ ಬೋಯಿಂಗ್ 737-800 ವಿಮಾನದ ರೆಕ್ಕೆಯು ಕಂಭಕ್ಕೆ ತಾಗಿದೆ. ಇದರಿಂದ ಕಂಭ ಹಾಗೂ ವಿಮಾನದ ರೆಕ್ಕೆ ಹಾನಿಗೊಂಡಿದೆ ಎಂದು ಮೂಲಗಳನ್ನುಲ್ಲೇಖಿಸಿ ndtv.com ವರದಿ ಮಾಡಿದೆ.
ಸದ್ಯ, ಯಾವುದೇ ಪ್ರಯಾಣಿಕರು ಗಾಯಗೊಂಡಿಲ್ಲ ಮತ್ತು ಎಲ್ಲಾ ಪ್ರಯಾಣಿಕರನ್ನು ಬೇರೊಂದು ವಿಮಾನದಲ್ಲಿ ಕಳುಹಿಸಲಾಯಿತು. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ವರದಿಯಾಗಿದೆ.
Next Story