ಮುಂಬೈನಲ್ಲಿ ಭಾರತದ ಮೊದಲ ಕೊರೋನವೈರಸ್ ರೂಪಾಂತರಿ XE ಪತ್ತೆ ವರದಿ ನಿರಾಕರಿಸಿದ ಕೇಂದ್ರ
ಮುಂಬೈ: ಭಾರತದ ಮೊದಲ ಕೊರೋನ ವೈರಸ್ ರೂಪಾಂತರಿ XE ಪ್ರಕರಣವು ಬುಧವಾರ ಮುಂಬೈನಲ್ಲಿ ಪತ್ತೆಯಾಗಿದೆ ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿರುವ ಕೇಂದ್ರ ಆರೋಗ್ಯ ಸಚಿವಾಲಯ, ಪ್ರಸ್ತುತ ಪುರಾವೆಗಳು ಕೋವಿಡ್ನ XE ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ ಎಂದು ಹೇಳಿದೆ.
ಮುಂಬೈನಲ್ಲಿ ಕೊರೋನವೈರಸ್ ನ XE ರೂಪಾಂತರದ ಪತ್ತೆಯ ವರದಿ ಬಂದ ಗಂಟೆಗಳ ನಂತರ ಪ್ರತಿಕ್ರಿಯಿಸಿದ ಕೇಂದ್ರ ಆರೋಗ್ಯ ಸಚಿವಾಲಯವು, ಪ್ರಸ್ತುತ ಪುರಾವೆಗಳು ಹೊಸ ರೂಪಾಂತರದ ಉಪಸ್ಥಿತಿಯನ್ನು ಸೂಚಿಸುವುದಿಲ್ಲ ಎಂದು ಹೇಳಿದೆ ಎಂದು ಪಿಐಬಿ ಮಹಾರಾಷ್ಟ್ರ ಟ್ವೀಟ್ನಲ್ಲಿ ತಿಳಿಸಿದೆ.
ಮುಂಬೈನಲ್ಲಿ ವರದಿಯಾದ ಕೋವಿಡ್ XE ರೂಪಾಂತರದ ಪ್ರಕರಣದ ಕುರಿತು ಆರೋಗ್ಯ ಸಚಿವಾಲಯದ ಸ್ಪಷ್ಟೀಕರಣವನ್ನು ಇದು ಉಲ್ಲೇಖಿಸಿದೆ.
Next Story