ದೇಶದ ಜನತೆಗೆ ಈದುಲ್ ಫಿತ್ರ್ ಶುಭಾಶಯ ಕೋರಿದ ಪ್ರಧಾನಿ ಮೋದಿ, ರಾಹುಲ್ ಗಾಂಧಿ
ಹೊಸದಿಲ್ಲಿ: ದೇಶದಾದ್ಯಂತ ಮೇ 2 ಮತ್ತು 3ರಂದು ಭಾರತೀಯ ಮುಸ್ಲಿಮರು ವಿವಿಧೆಡೆಗಳಲ್ಲಿ ಈದುಲ್ ಫಿತ್ರ್ ಹಬ್ಬ ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಮೂಲಕ ಶುಭಾಶಯ ಸಲ್ಲಿಸಿದ್ದಾರೆ.
"ಈದುಲ್ ಫಿತ್ರ್ ಶುಭಕಾಮನೆಗಳು. ಈ ಶುಭ ಸಂದರ್ಭವು ನಮ್ಮ ಸಮಾಜದಲ್ಲಿ ಒಗ್ಗಟ್ಟಿನ ಮತ್ತು ಸಹೋದರತ್ವದ ಮನೋಭಾವವನ್ನು ಹೆಚ್ಚಿಸಲಿ. ಎಲ್ಲರಿಗೂ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ" ಎಂದು ಪ್ರಧಾನಿ ನರೇಂದ್ರ ಮೋದಿ ಶುಭ ಹಾರೈಸಿದ್ದಾರೆ. "ಈದ್ ಮುಬಾರಕ್. ಈ ಪವಿತ್ರ ಹಬ್ಬವು ಪ್ರೀತಿಯ ಮನೋಭಾವವನ್ನು ತರಲಿ ಮತ್ತು ನಮ್ಮೆಲ್ಲರನ್ನು ಸಹೋದರತ್ವ ಮತ್ತು ಸೌಹಾರ್ದತೆಯ ಬಾಂಧವ್ಯದಲ್ಲಿ ಒಂದುಗೂಡಿಸಲಿ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
Best wishes on Eid-ul-Fitr. May this auspicious occasion enhance the spirit of togetherness and brotherhood in our society. May everyone be blessed with good health and prosperity.
— Narendra Modi (@narendramodi) May 2, 2022
Eid Mubarak! May this auspicious festival usher in the spirit of love, and unite us all in the bond of brotherhood and harmony. pic.twitter.com/MEJ8GDKSm3
— Rahul Gandhi (@RahulGandhi) May 2, 2022