ಗೋವಾದಲ್ಲಿ ಅಪ್ರಾಪ್ತ ವಯಸ್ಸಿನ ರಶ್ಯನ್ ಬಾಲಕಿಯ ಅತ್ಯಾಚಾರ ಪ್ರಕರಣ: ಗದಗ ಮೂಲದ ಆರೋಪಿ ಬಂಧನ
ಪಣಜಿ, ಮೇ 12: ಉತ್ತರ ಗೋವಾದ ಆರಂಬೋಲ್ ರೆಸಾರ್ಟ್ ನಲ್ಲಿ 12 ವರ್ಷದ ರಶ್ಯಾ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ನೆರೆಯ ಕರ್ನಾಟಕದಿಂದ ವ್ಯಕ್ತಿಯೋರ್ವನನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ಮೇ 6ರಂದು ರಶ್ಯದ ಬಾಲಕಿಯ ಮೇಲೆ ಎಸಗಲಾದ ಲೈಂಗಿಕ ದೌರ್ಜನ್ಯದ ಪ್ರಕರಣಕ್ಕೆ ಸಂಬಂಧಿಸಿ ಪೆರ್ನೇಂನ ಪೊಲೀಸ್ ತಂಡ ಆರೋಪಿ ರವಿ ಲಮಾಣಿ (28)ಯನ್ನು ಕರ್ನಾಟಕದ ಗದಗದಿಂದ ಮೇ 10ರಂದು ಬಂಧಿಸಿದೆ. ಅತ್ಯಾಚಾರ ಸಂತ್ರಸ್ತ ಬಾಲಕಿಯ ತಾಯಿ ಮೇ 9ರಂದು ದೂರು ಸಲ್ಲಿಸಿದ್ದಾರೆ. ರೆಸಾರ್ಟ್ ಈಜುಕೊಳದಲ್ಲಿ ಹಾಗೂ ಅನಂತರ ಹೊಟೇಲ್ ಕೊಠಡಿಯಲ್ಲಿ ಆರೋಪಿಗಳು ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ.
ಆಕೆ ಕೊಠಡಿ ಪರಿಚಾರಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಳು ಎಂದು ಅಪ್ರಾಪ್ತ ಬಾಲಕಿಯ ತಾಯಿ ದೂರಿನಲ್ಲಿ ಹೇಳಿದ್ದಾರೆ ಎಂದು ಪೆರ್ನೇಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿಕ್ರಮ್ ನಾಯ್ಕ್ ತಿಳಿಸಿದ್ದಾರೆ. ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದ. ಆದರೆ, ದೂರು ಸ್ವೀಕರಿಸಿದ 24 ಗಂಟೆಯ ಒಳಗೆ ನಾವು ಆತನನ್ನು ಗದಗದಲ್ಲಿ ಪತ್ತೆ ಮಾಡಿ ಬಂಧಿಸಿದೆವು ಎಂದು ವಿಕ್ರಮ್ ನಾಯ್ಕ್ ತಿಳಿಸಿದ್ದಾರೆ.