ಉತ್ತರ ಪ್ರದೇಶ ಗೂಂಡಾ ಪ್ರದೇಶವಾಗಿದೆ: ಪ್ರಶಾಂತ್ ಭೂಷಣ್
-

Photo: PTI
ಲಕ್ನೋ: ಪ್ರವಾದಿ ಮುಹಮ್ಮದ್ ಅವರ ನಿಂದನೆ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಉತ್ತರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸಾಮಾಜಿಕ ಕಾರ್ಯಕರ್ತರು, ನಾಯಕರ ಮನೆಗಳ ಮೇಲೆ ಆದಿತ್ಯನಾಥ್ ಸರ್ಕಾರ ಬುಲ್ಡೋಝರ್ ಚಲಾಯಿಸಲು ಆರಂಭಿಸಿದೆ.
ಅಕ್ರಮ ಕಟ್ಟಡವೆಂದು ಆರೋಪಿಸಿ ಉತ್ತರ ಪ್ರದೇಶದ ಸ್ಥಳೀಯಾಡಳಿತ ಆರೋಪಿಗಳ ಮನೆ ಧ್ವಂಸಗೊಳಿಸುತ್ತಿದೆ. ಪ್ರವಾದಿ ಅವಹೇಳನಕ್ಕೆ ವಿರುದ್ಧದ ನೆಪದಲ್ಲಿ ಈ ಹಿಂದೆ ಸಿಎಎ ಕಾಯ್ದೆ ವಿರುದ್ಧ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ ಸಾಮಾಜಿಕ ಕಾರ್ಯಕರ್ತರ ವಿರುದ್ಧ ಸೇಡು ತೀರಿಸಲಾಗುತ್ತಿದೆ ಎಂಬ ಆರೋಪವೂ ವ್ಯಾಪಕವಾಗಿ ಕೇಳಿಬಂದಿದೆ.
ಇದೇ ಹಿನ್ನೆಲೆಯಲ್ಲಿ, ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್ ಫಾತಿಮಾ ಅವರ ಮನೆಗೂ ಉತ್ತರ ಪ್ರದೇಶ ಸರ್ಕಾರ ಬುಲ್ಡೋಝರ್ ಚಲಾಯಿಸಿದ್ದು, ಫಾತಿಮಾ ತಂದೆ, ಜಾವೇದ್ ಮುಹಮ್ಮದ್ ಹಿಂಸಾಚಾರದ ಮಾಸ್ಟರ್ ಮೈಂಡ್ ಎಂದು ಸರ್ಕಾರದ ಮೂಲಗಳು ಆರೋಪಿಸಿದೆ. ವಿದ್ಯಾರ್ಥಿ ಹೋರಾಟಗಾರ್ತಿ ಅಫ್ರೀನ್ ನಿವಾಸಕ್ಕೆ ಬುಲ್ಡೋಝರ್ ಚಲಾಯಿಸುವುದರ ವಿರುದ್ಧ ಅನೇಕ ಹೋರಾಟಗಾರರು, ಪತ್ರಕರ್ತರು , ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಲಭ್ಯವಾಗಿರುವ ದಾಖಲೆ ಪ್ರಕಾರ ಜಾವೇದ್ ಅವರ ನಿವಾಸ ಅಕ್ರಮವಲ್ಲ ಎಂದು ಸಾಬೀತಾಗಿದೆ ಎಂದು ಹಲವರು ಹೇಳಿದ್ದು, ಉತ್ತರ ಪ್ರದೇಶ ಸರ್ಕಾರ ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದಾರೆ.
ಈ ಕುರಿತು ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದು, “ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದರೂ ಸಹ ಯುಪಿ ಸರ್ಕಾರವು ಅಫ್ರೀನ್ ಫಾತಿಮಾ ಅವರ ಮನೆಯನ್ನು ಕೆಡವುತ್ತಿದೆ. ಯುಪಿಯಲ್ಲಿ ಕಾನೂನು ಸುವ್ಯವಸ್ಥೆ ಉಳಿದಿಲ್ಲ! ಗೂಂಡಾ ಪ್ರದೇಶವಾಗಿ ಮಾರ್ಪಟ್ಟಿದೆ” ಎಂದು ಬರೆದಿದ್ದಾರೆ.
ಭಾರೀ ಪೊಲೀಸ್ ಬಂದೋಬಸ್ತ್ ನಡುವೆ ಜಾವೇದ್ ಅವರ ಮನೆಯನ್ನು ಬುಲ್ಡೋಜರ್ ಮೂಲಕ ಕೆಡವಲಾಗಿದೆ. ಜೆಎನ್‌ಯುನಲ್ಲಿ ಓದುತ್ತಿರುವ ಅಫ್ರೀನ್ ಪರವಾಗಿ ಮತ್ತು ಆದಿತ್ಯನಾಥ್ ಸರ್ಕಾರದ ಬುಲ್ಡೋಝರ್ ನೀತಿ ವಿರುದ್ಧ ಜೆಎನ್‌ಯುನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವರದಿಯಾಗಿದೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಅಫ್ರೀನ್ ಅವರು, ಹಿಜಾಬ್ ನಿಷೇಧದ ಸಮಯದಲ್ಲಿಯೂ ದೊಡ್ಡ ದನಿಯಾಗಿದ್ದರು. ಹಿಜಾಬ್ ನಿಷೇಧದ ಸಮಯದಲ್ಲಿ ದಕ್ಷಿಣ ಭಾರತದ ಹಲವಾರು ನಗರಗಳಿಗೆ ಅಫ್ರೀನ್ ಭೇಟಿ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಅಫ್ರೀನ್ ಅವರನ್ನು ಬೆಂಬಲಿಸಿ ಶಶಿ ತರೂರ್ ಟ್ವೀಟ್ ಮಾಡಿದ್ದಾರೆ. “ಜೆಎನ್‌ಯು ವಿದ್ಯಾರ್ಥಿನಿಯ ಕುಟುಂಬದ ಮನೆಯನ್ನು ಕೆಡವಲಾಗಿದೆ ಎಂಬ ಸುದ್ದಿ ಕೇಳಿ ಆಘಾತವಾಯಿತು. ಕಾನೂನು ಪ್ರಕ್ರಿಯೆಯ ಅಡಿಯಲ್ಲಿ ಕ್ರಮ ಕೈಗೊಳ್ಳುವುದು ಪ್ರಜಾಪ್ರಭುತ್ವದಲ್ಲಿ ಮೂಲಭೂತ ಹಕ್ಕು. ಯಾವ ಕಾನೂನಿನ ಅಡಿಯಲ್ಲಿ ಮತ್ತು ಯಾವ ವಿಧಾನವನ್ನು ಅನುಸರಿಸಿ ಮನೆ ಕೆಡವಲಾಗಿದೆ? ಭಾರತದ ಸಂವಿಧಾನದಿಂದ ಯುಪಿ ತನ್ನನ್ನು ತಾನು ವಿನಾಯಿತಿ ಮಾಡಿಕೊಂಡಿದೆಯೇ?” ಎಂದು ಸಂಸದ ತರೂರು ಪ್ರಶ್ನಿಸಿದ್ದಾರೆ.
"ವಿದ್ಯಾರ್ಥಿ ಕಾರ್ಯಕರ್ತೆ ಮತ್ತು ವಿದ್ವಾಂಸೆ ಅಫ್ರೀನ್ ಫಾತಿಮಾ ಅವರ ಪೋಷಕರು ಮತ್ತು ಸಹೋದರಿಯನ್ನು ಅಲಹಾಬಾದ್ ಪೊಲೀಸರು ಯಾವುದೇ ವಾರಂಟ್ ಇಲ್ಲದೆ ಮಧ್ಯರಾತ್ರಿಯಲ್ಲಿ ಬಂಧಿಸಿದ್ದಾರೆ ಮತ್ತು ಅವರು ಅವರ ಮನೆಯನ್ನು ಕೆಡವುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಭಿನ್ನಾಭಿಪ್ರಾಯ ಅಪರಾಧವಲ್ಲ" ಎಂದು ಸುಚಿತ್ರಾ ವಿಜಯನ್ ಟ್ವೀಟ್ ಮಾಡಿದ್ದಾರೆ.
“ಅಫ್ರೀನ್ ಫಾತಿಮಾ ಅವರ ಮನೆಯ ಧ್ವಂಸವು ಮೋದಿ ಸರ್ಕಾರದ ಎಲ್ಲಾ ಭಿನ್ನಮತೀಯರಿಗೆ ಮತ್ತು ಟೀಕಾಕಾರರಿಗೆ ಒಂದು ಪ್ರತಿಧ್ವನಿಸುವ ಸಂದೇಶವಾಗಿದೆ. ಈ ವೀಡಿಯೊ ಫ್ಯಾಸಿಸಂನ ಅತ್ಯಂತ ನಿಖರವಾದ ವ್ಯಾಖ್ಯಾನವಾಗಿದೆ. ಭಾರತೀಯರು ಸಾಮೂಹಿಕವಾಗಿ ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಈ ಕ್ಷುಲ್ಲಕ ಸೇಡಿನ ಮನೋಭಾವವು ಒಂದು ರಾಷ್ಟ್ರವಾಗಿ ನಮಗೆ ನಾಚಿಕೆ ಆಗಿದೆ” ಎಂದು ಪತ್ರಕರ್ತೆ ರಾಣಾ ಅಯ್ಯೂಬ್ ಟ್ವೀಟ್ ಮಾಡಿದ್ದಾರೆ.
The UP govt is demolishing @AfreenFatima136 house, despite it being fully legal. There is no rule of law left in UP! It has become Gunda Pradesh.#StandWithAfreenFatima https://t.co/yJHvcI4f5i pic.twitter.com/jus0vEVvLI
— Prashant Bhushan (@pbhushan1) June 12, 2022
Muslim activist Afreen Fatima’s house is being torn down.
— Hussain Haidry (@hussainhaidry) June 12, 2022
I am trying to find the appropriate words to react to this, so that the constitutional framework and secular fabric of this country does not get disturbed. https://t.co/GfH6hhVKB6
The demolition of Afreen Fatima’s house is a resounding message to all dissenters and critics of the Modi government. This video is the most precise definition of fascism and Indians need to collectively hang their heads in shame. This petty vindictiveness is us as a nation pic.twitter.com/mvnqgWNy9b
— Rana Ayyub (@RanaAyyub) June 12, 2022
Shocked to receive this from JNU with the update that the family’s home has been demolished: https://t.co/iQ2BEJ9kFt
— Shashi Tharoor (@ShashiTharoor) June 12, 2022
Due process of law is fundamental to democracy. Under what law & following what process has this been done? Has UP exempted itself from the Constitution of India?
Stand in unflinching solidarity with Afreen and her family. We stand against the intimidation tactics of the BJP-RSS.#StandWithAfreenFatima pic.twitter.com/yvNprnh6aS
— Aishe (ঐশী) (@aishe_ghosh) June 12, 2022
Afreen Fatima’s home has been brought down. Over 48 hours, her parents & 19-year-old sister have been illegally detained. She has been threatened and tormented. Now their home has been completely destroyed.The Hindu Rashtra arrived a long time ago, India is now an apartheid state pic.twitter.com/f7WQT6x2UX
— Suchitra Vijayan சுசித்ரா விஜயன் (@suchitrav) June 12, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.