ಉದ್ಯಮಿಯಿಂದ ಲೇಖಕಿಯ ಅತ್ಯಾಚಾರ; ದೂರು ದಾಖಲಿಸದಂತೆ ‘‘ಡಿ-ಗ್ಯಾಂಗ್’’ನಿಂದ ಬೆದರಿಕೆ: ಪೊಲೀಸ್
ಮುಂಬೈ (ಮಹಾರಾಷ್ಟ್ರ), ಜೂ. 16: ಮುಂಬೈಯ ಜುಹು ಪ್ರದೇಶದಲ್ಲಿ 35ರ ಹರೆಯದ ಮಹಿಳೆಯ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ 75 ವರ್ಷದ ಉದ್ಯಮಿಯೋರ್ವರ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘‘ಮುಂಬೈಯ ಜುಹು ಪ್ರದೇಶದಲ್ಲಿರುವ ಪಂಚತಾರಾ ಹೊಟೇಲ್ನಲ್ಲಿ 35ರ ಹರೆಯದ ಲೇಖಕಿಯನ್ನು 75ರ ಹರೆಯದ ಉದ್ಯಮಿ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ತನಿಖೆ ಮುಂದುವರಿಸಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಆರೋಪಿ ಮಹಿಳೆಯನ್ನು ಭೂಗತ ಪಾತಕಿ ದಾವೂದ್ ಇಬ್ರಾಹೀಂ ಹೆಸರು ಹೇಳಿ ಬೆದರಿಸಿದ್ದಾನೆ ಹಾಗೂ ಪೊಲೀಸರಿಗೆ ದೂರು ನೀಡಿದರೆ, ಹತ್ಯೆಗೈಯಲಾಗುವುದು ಎಂದು ಬೆದರಿಕೆ ಒಡ್ಡಿದ್ದಾನೆ ಎಂದು ಪೊಲೀಸರಿಗೆ ದೊರಕಿದ ಮಾಹಿತಿಯಲ್ಲಿ ತಿಳಿದು ಬಂದಿದೆ.
ಸಂತ್ರಸ್ತ ಮಹಿಳೆ ಉದ್ಯಮಿಯ ವಿರುದ್ಧ ಮುಂಬೈಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನೊಂದು ಆಘಾತಕಾರಿ ಬೆಳವಣಿಗೆ ಎಂದರೆ, ಉದ್ಯಮಿಯ ವಿರುದ್ಧ ದೂರು ದಾಖಲಿಸದಂತೆ ‘ಡಿ’ ಗ್ಯಾಂಗ್ನಿಂದ ಸಂತ್ರಸ್ತ ಮಹಿಳೆ ಬೆದರಿಕೆ ಕರೆ ಸ್ವೀಕರಿಸಿದ್ದಾರೆ ಎಂದು ಹೇಳಲಾಗಿದೆ.