ಶಾಪೂರ್ಜಿ ಪಲ್ಲೊಂಜಿ ಗ್ರೂಪ್ನ ಮುಖ್ಯಸ್ಥ ಪಲ್ಲೊಂಜಿ ಮಿಸ್ತ್ರಿ ನಿಧನ
Photo:Twitter
ಮುಂಬೈ: ಶಾಪೂರ್ಜಿ ಪಲ್ಲೊಂಜಿ ಗ್ರೂಪ್ನ ಮುಖ್ಯಸ್ಥ ಪಲ್ಲೊಂಜಿ ಮಿಸ್ತ್ರಿ ಅವರು ಸೋಮವಾರ ರಾತ್ರಿ ದಕ್ಷಿಣ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಕಂಪನಿಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
93 ವರ್ಷ ವಯಸ್ಸಿನ ಮಿಸ್ತ್ರಿ150 ವರ್ಷಗಳ ಇತಿಹಾಸವಿರುವ ಶಾಪೂರ್ಜಿ ಪಲ್ಲೊಂಜಿ ಸಮೂಹದ ಮುಖ್ಯಸ್ಥರಾಗಿದ್ದರು. ಕಂಪೆನಿಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಕೈಗಾರಿಕೋದ್ಯಮಿಯಾಗಿ ಅವರ ಕೊಡುಗೆಯನ್ನು ಪರಿಗಣಿಸಿ ಭಾರತ ಸರಕಾರವು 2016ರಲ್ಲಿ ಪಲ್ಲೊಂಜಿ ಮಿಸ್ತ್ರಿ ಅವರಿಗೆ ಪದ್ಮಭೂಷಣ ನೀಡಿ ಗೌರವಿಸಿದೆ. ದೇಶದ ಹಿರಿಯ ಸಿರಿವಂತ ವ್ಯಕ್ತಿಯಾಗಿಯೂ ಪಲ್ಲೋಂಜಿ ಹೆಸರಾಗಿದ್ದರು.
ಫೋಬ್ಸ್ ಇತ್ತೀಚಿನ ಮಾಹಿತಿಯ ಪ್ರಕಾರ, ಪಲ್ಲೋಂಜಿ ಅವರ ಒಟ್ಟು ಸಂಪತ್ತು ರೂ. 1 ಲಕ್ಷ ಕೋಟಿಗೂ ಅಧಿಕ. ಅವರು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 125ನೇ ಸ್ಥಾನದಲ್ಲಿದ್ದಾರೆ. ಟಾಟಾ ಸನ್ಸ್ ಸಮೂಹದಲ್ಲಿ ಶೇ.18.4ರಷ್ಟು ಪಾಲುದಾರಿಕೆ ಹೊಂದಿದ್ದಾರೆ.
Next Story