ಮುಂದಿನ 30-40 ವರ್ಷಗಳು ಬಿಜೆಪಿಯ ಯುಗ, ಭಾರತ ವಿಶ್ವಗುರುವಾಗಲಿದೆ: ಗೃಹಸಚಿವ ಅಮಿತ್ ಶಾ ಹೇಳಿಕೆ
ಹೈದರಾಬಾದ್: ಮುಂದಿನ 30 ರಿಂದ 40 ವರ್ಷಗಳು ತಮ್ಮ ಪಕ್ಷದ ಯುಗವಾಗಲಿದೆ ಮತ್ತು ಭಾರತವು "ವಿಶ್ವ ಗುರು" ಆಗಲಿದೆ ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರವಿವಾರ ಹೇಳಿಕೆ ನೀಡಿದ್ದಾರೆ.
ಇಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ನಿರ್ಣಯವನ್ನು ಪ್ರಸ್ತಾಪಿಸಿದ ಶಾ, "ಪಾರಂಪರಿಕ ರಾಜಕಾರಣ, ಜಾತೀಯತೆ ಮತ್ತು ತುಷ್ಟೀಕರಣದ ರಾಜಕೀಯವು" ಮಹಾನ್ ಪಾಪಗಳಾಗಿದ್ದು, ವರ್ಷಗಳಿಂದ ದೇಶವು ಅನುಭವಿಸುತ್ತಿರುವ ನೋವುಗಳ ಹಿಂದಿನ ಪ್ರಮುಖ ಕಾರಣ ಇದಾಗಿದೆ ಎಂದು ಹೇಳಿದರು.
ತೆಲಂಗಾಣ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿ ಕುಟುಂಬ ಆಡಳಿತವನ್ನು ಕೊನೆಗೊಳಿಸಲಿದೆ ಮತ್ತು ಆಂಧ್ರಪ್ರದೇಶ, ತಮಿಳುನಾಡು ಮತ್ತು ಒಡಿಶಾದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವರು ಹೇಳಿದರು.
Next Story