ಶ್ರೀಲಂಕಾ ಬಿಕ್ಕಟ್ಟು: ಪ್ರಧಾನಮಂತ್ರಿಯ ಮನೆಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು
Photo: Twitter/JDSLanka
ಕೊಲಂಬೊ: ರಾಜಧಾನಿಯಲ್ಲಿರುವ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಮನೆಗೆ ಶನಿವಾರ ಸಂಜೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ. ದ್ವೀಪ ರಾಷ್ಟ್ರ ಶ್ರೀಲಂಕದಲ್ಲಿ ಸಂಪೂರ್ಣ ಹದಗೆಟ್ಟಿರುವ ಆರ್ಥಿಕ ಬಿಕ್ಕಟ್ಟಿನಿಂದ ಜನರು ರೊಚ್ಚಿಗೆದ್ದು ಕೃತ್ಯವೆಸಗಿದ್ದಾಗಿ ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
‘ಪ್ರತಿಭಟನಾಕಾರರು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಖಾಸಗಿ ನಿವಾಸಕ್ಕೆ ನುಗ್ಗಿ ಬೆಂಕಿ ಹಚ್ಚಿದ್ದಾರೆ’ ಎಂದು ಲಂಕಾ ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದರೂ, ಅವರು ಪ್ರಧಾನಿ ಗೃಹ ಪ್ರವೇಶಿಸಿ ದಾಂಧಲೆಗೈದಿದ್ದಾರೆ. ಪ್ರತಿಭಟನಾಕಾರರು ಪ್ರಧಾನಿಯವರ ವಾಹನಗಳಿಗೆ ಹಾನಿ ಮಾಡುತ್ತಿರುವುದು ಕಂಡುಬಂದಿದೆ.
ಮೇ ತಿಂಗಳಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದ ವಿಕ್ರಮಸಿಂಘೆ ಅವರು ಸರ್ಕಾರದ ಮುಂದುವರಿಕೆ ಮತ್ತು ಎಲ್ಲಾ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಈಗಾಗಲೇ ಘೋಷಿಸಿದ್ದಾರೆ.
https://t.co/OzckR6kcYV
— ViralVdoz (@viralvdoz) July 9, 2022
Sri Lanka: Protesters have set Ranil Wickremesinghe's private residence on fire. A few hours back he announced he will be resigning as the PM.#Protesters #SriLankaCrisis #SriLankaProtests # Ranil_Wickremesinghe #House #Fire pic.twitter.com/oAenRoeCGY
BREAKING : Sri Lankan Prime Minister's residence under fire
— Zaid Ahmd (@realzaidzayn) July 9, 2022
Protestors stormed the private residence of PM Ranil Wickremesinghe and set fire on it.#SriLanka #අරගලයටජය #GoHomeGota #Colombo pic.twitter.com/mzD3PmS7PB