ರಾಮನಾಥ್ ಕೋವಿಂದ್ ರನ್ನು ನಿರ್ಲಕ್ಷಿಸಿದ ಪ್ರಧಾನಿ ಮೋದಿ: ಸಾಮಾಜಿಕ ತಾಣದಲ್ಲಿ ವೀಡಿಯೊ ವೈರಲ್
-

Photo: SS/Twitter
ಹೊಸದಿಲ್ಲಿ: ನಿರ್ಗಮಿತ ರಾಷ್ಟ್ರಪತಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಕೋವಿಂದ್ ಅವರನ್ನು ನಿರ್ಲಕ್ಷಿಸಿ ಕ್ಯಾಮೆರಾವನ್ನು ನೋಡುತ್ತಿರುವಂತೆ ತೋರುವ ಪ್ರಧಾನಿ ಮೋದಿ ಅವರ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ನಿರ್ಗಮಿಸುತ್ತಿರುವ ರಾಷ್ಟ್ರಪತಿಗೆ ಗೌರವ ಸಲ್ಲಿಸುವುದಕ್ಕಿಂತ ಕೆಮರಾಗೆ ಪೋಸ್ ಕೊಡುವುದೇ ಪ್ರಧಾನಿಯವರ ಆದ್ಯತೆಯಾಗಿದೆ ಎಂದು ಹಲವು ನೆಟ್ಟಿಗರು ಟೀಕಿಸಿದ್ದಾರೆ.
ಎಎಪಿಯ ಸಂಜಯ್ ಎಎಪಿಯ ಸಂಸದ ಸಂಜಯ್ ಸಿಂಗ್ ಈ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು."(ಮೋದಿಗೆ) ಅಧ್ಯಕ್ಷರಿಗಿಂತ ಫೋಟೋಗಳು ಮುಖ್ಯ." ಎಂದು ಕಿಡಿಕಾರಿರುವ ಸಿಂಗ್, ಪ್ರಧಾನಿ ಮೋದಿ ರಾಷ್ಟ್ರಪತಿಯನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ.
“ಇಂತಹ ಅವಮಾನಕ್ಕೆ ಕ್ಷಮಿಸಿ ಸರ್. ಈ ಜನ ಹೀಗಿದ್ದಾರೆ, ನಿಮ್ಮ ಅವಧಿ ಮುಗಿದಿದೆ, ಈಗ ಅವರು ನಿಮ್ಮತ್ತ ನೋಡುವುದಿಲ್ಲ” ಎಂದು ಸಂಜಯ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಭಾರತದ ಪ್ರಧಾನಿ ದೇಶದ ‘ದಲಿತ’ ರಾಷ್ಟ್ರಪತಿಯನ್ನು ನಿರ್ಲಕ್ಷಿಸಿ ಕ್ಯಾಮೆರಾಗೆ ಆದ್ಯತೆ (ನೀಡುತ್ತಿದ್ದಾರೆ)ʼ ಎಂದು ಪ್ರೊಫೆಸರ್ ಅಶೋಕ್ ಸ್ವೈನ್ ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಇದೇ ವೇಳೆ, ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಕೂಡಾ ಅಖಾಡಕ್ಕೆ ಇಳಿದಿದ್ದು, ಎಎಪಿ ಸೇರಿದಂತೆ ಪ್ರತಿಪಕ್ಷದ ನಾಯಕರು ಹಂಚಿರುವ ವಿಡಿಯೋ ಎಡಿಟೆಡ್ ಎಂದು ಹೇಳಿದೆ. ಬಿಜೆಪಿಯ ಅಮಿತ್ ಮಾಳವಿಯಾ ಅವರು ಈ ವಿಡಿಯೋದ ಸಂಪೂರ್ಣ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಪ್ರಧಾನಿ ಅವರು ರಾಮನಾಥ್ ಕೋವಿಂದ್ ಅವರಿಗೆ ಅವಮಾನಿಸಿದ್ದಾರೆ ಎಂಬ ಪ್ರತಿಪಾದನೆಯನ್ನು ಅಲ್ಲಗೆಳೆದಿದ್ದಾರೆ.
“ನಮ್ಮ ಪ್ರಧಾನಿಯವರು ರಾಷ್ಟ್ರಪತಿಗಳಿಗೆ ಗೌರವ ಕೊಡಲಿಲ್ಲ ಎಂದು ಜನರು ಹಂಚಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣ ವಿಡಿಯೋ. ನೀವು ಬಿಜೆಪಿ ಅಥವಾ ನರೇಂದ್ರ ಮೋದಿಯವರೊಂದಿಗೆ ಭಿನ್ನಮತ ಹೊಂದಿರಬಹುದು. ಆದರೆ, ಸುಳ್ಳು ಆರೋಪ ಮಾಡುವುದು ಪಾಪ.” ಎಂದು ನಾಗ ಗುರುನಾತ ಸರ್ಮ ಎಂಬವರು ಟ್ವೀಟ್ ಮಾಡಿದ್ದಾರೆ.
ऐसा अपमान Very Sorry Sir
— Sanjay Singh AAP (@SanjayAzadSln) July 24, 2022
ये लोग ऐसे ही हैं, आपका कार्यकाल ख़त्म अब आपकी तरफ़ देखेंगे भी नही। pic.twitter.com/xaGIOkuyDM
Fake news peddler Sanjay Singh at it again.
— Amit Malviya (@amitmalviya) July 24, 2022
जिनके (केजरीवाल से ले कर सिसोदिया तक) झूठ हर रोज़ पकड़े जाते हो, और अपमान सहना आदत, उन्हें लोगों का सम्मान कैसे किया जाता है, क्या पता? https://t.co/ntGA3OU5wY pic.twitter.com/1nYaN2lfE4
People are sharing like anything that our PM did not give respect to the President. This is the full video. You may differ with BJP or Narendra Modi. But, making fake allegations is a sin. pic.twitter.com/RJXdyDU7jt
— Naga Gurunatha Sarma (@mngsarma) July 24, 2022
India’s Prime Minister ignores country’s ‘Dalit’ President and prioritizes the camera! pic.twitter.com/q8BvAX0Vxk
— Ashok Swain (@ashoswai) July 23, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.