ದೇವಸ್ಥಾನದ ಕಾಣಿಕೆ ಹುಂಡಿ ಕದಿಯುವ ಮುನ್ನ ದೇವಿಗೆ ಕೈಮುಗಿದು ಪ್ರಾರ್ಥಿಸಿದ ಕಳ್ಳ: ವೀಡಿಯೊ ವೈರಲ್
Photo: Video Screengrab
ಜಬಲ್ಪುರ: ಕಳ್ಳನೊಬ್ಬ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯನ್ನು ಕದಿಯುವ ಮುನ್ನ ದೇವಸ್ಥಾನದಲ್ಲಿ ದೇವತೆಯ ಮುಂದೆ ಕೈಮುಗಿದು ಪ್ರಾರ್ಥಿಸಿದ ಘಟನೆಯು ಮಧ್ಯಪ್ರದೇಶದ ಜಬಲ್ಪುರದಿಂದ ವರದಿಯಾಗಿದೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಕೂಡಲೇ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಬಳಕೆದಾರರು ವೀಡಿಯೊಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ವೀಡಿಯೊದಲ್ಲಿ, ಕಳ್ಳನು ದೇವಾಲಯಕ್ಕೆ ಪ್ರವೇಶಿಸಿ ದೇವಿಗೆ ಕೈಮುಗಿದು ಪ್ರಾರ್ಥಿಸಿ ಕಾಣಿಕೆ ಪೆಟ್ಟಿಗೆಯೊಂದಿಗೆ ಪರಾರಿಯಾಗುವುದನ್ನು ಕಾಣಬಹುದು. ನ್ಯೂಸ್ 24 ರ ಅಧಿಕೃತ ಟ್ವಿಟರ್ ಖಾತೆಯ ಪ್ರಕಾರ, ವೀಡಿಯೊ ಜಬಲ್ಪುರದ ದೇವಸ್ಥಾನದ್ದಾಗಿದೆ.
ಕೆಲವು ಬಳಕೆದಾರರು ಘಟನೆಯ ಬಗ್ಗೆ ತಮಾಷೆಯಾಗಿ ಪ್ರತಿಕ್ರಿಯಿಸಿದರೆ, ಇತರರು ಆತನ ಕುರಿತು ಅನುಕಂಪ ವ್ಯಕ್ತಪಡಿಸಿದ್ದಾರೆ. ಆ ವ್ಯಕ್ತಿ ತೀವ್ರ ಅವಶ್ಯಕತೆಗೆ ಒಳಗಾಗಿರಬಹುದು, ಅದು ದೇವಾಲಯದಿಂದ ಕದಿಯಲು ಕಾರಣವಾಗಿರಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
जबलपुर : चोर ने दोनों हाथ जोड़ पहले लक्ष्मी मां से लिया आशीर्वाद फिर की मंदिर में चोरी, वीडियो वायरल pic.twitter.com/wU1wljVFzI
— News24 (@news24tvchannel) August 9, 2022