ಪ್ರಾಣಿಗಳೂ ತಿನ್ನಲಿಕ್ಕಿಲ್ಲ: ಕಳಪೆ ಗುಣಮಟ್ಟದ ಊಟದ ಕುರಿತು ಬೀದಿಯಲ್ಲಿ ನಿಂತು ಅಳುತ್ತಿರುವ ಉತ್ತರಪ್ರದೇಶ ಪೊಲೀಸ್
-

ಫಿರೋಝಾಬಾದ್: ತನ್ನ ಸುತ್ತ ಹಲವು ಜನರು ನೆರೆದಿರುವಂತೆಯೇ ಉತ್ತರ ಪ್ರದೇಶದ ಫಿರೋಝಾಬಾದ್ (Firozabad) ಜಿಲ್ಲೆಯ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬರು ರಸ್ತೆಯಲ್ಲಿ ಆಹಾರದ ತಟ್ಟೆ ಹಿಡಿದುಕೊಂಡು ಪೊಲೀಸ್ ಮೆಸ್‍ನಲ್ಲಿ (Police mess) ಒದಗಿಸಲಾಗುವ ಆಹಾರದ ಗುಣಮಟ್ಟದ ಬಗ್ಗೆ ದೂರುತ್ತಾ ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಾಣಿಸುತ್ತದೆ. ಇನ್ನೊಂದು ವೀಡಿಯೋದಲ್ಲಿ ಡಿವೈಡರ್ ಒಂದರಲ್ಲಿ ಅನ್ನ, ಚಪಾತಿ ಹಾಗೂ ಪಲ್ಯ ಇರುವ ತಟ್ಟೆಯನ್ನು ಕೈಯ್ಯಲ್ಲಿ ಹಿಡಿದುಕೊಂಡಿರುವ ಈತ "ಇದನ್ನು ಪ್ರಾಣಿಗಳು ಕೂಡ ತಿನ್ನಲಿಕ್ಕಿಲ್ಲ" ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಸದ್ಯ ಈ ವೀಡಿಯೊ ವೈರಲ್ ಆಗಿದೆ.
ಮನೋಜ್ ಕುಮಾರ್ ಎಂಬ ಹೆಸರಿನ ಪೊಲೀಸ್ ಕಾನ್‍ಸ್ಟೇಬಲ್‍ನ (Police Constable) ಈ ವೀಡಿಯೋ ವೈರಲ್ ಆಗಿದ್ದು ಆಹಾರದ ತಟ್ಟೆ ಕೈಯ್ಯಲ್ಲಿ ಹಿಡಿದುಕೊಂಡು ಆತ ಅಳುತ್ತಿರುವಂತೆಯೇ ಹಿರಿಯಾಧಿಕಾರಿಯೊಬ್ಬರು ಆತನನ್ನು ಸಮಾಧಾನಿಸಿ ಠಾಣೆಯೊಳಗೆ ಕರೆದೊಯ್ಯಲು ಯತ್ನಿಸುತ್ತಿರುವುದು ಕಾಣಿಸುತ್ತದೆ.
ಆಹಾರದ ಗುಣಮಟ್ಟದ ಬಗ್ಗೆ ಹಿರಿಯಾಧಿಕಾರಿಗಳಿಗೆ ದೂರಿದರೂ ಕ್ರಮಕೈಗೊಂಡಿಲ್ಲ ಎಂದು ಆತ ದೂರಿದ್ದಾನೆ. "ನನ್ನನ್ನು ಕೆಲಸದಿಂದ ತೆಗೆದು ಹಾಕಲಾಗುವುದಾಗಿ ಬೆದರಿಸಲಾಗುತ್ತಿದೆ" ಎಂದೂ ಆತ ಹೇಳಿಕೊಂಡಿದ್ದಾನೆ.
"ಪೊಲೀಸರಿಗೆ ಪೌಷ್ಠಿಕಾಂಶಯುಕ್ತ ಆಹಾರ ಒದಗಿಸಲು ಸರಕಾರ ಅನುದಾನ ಒದಗಿಸುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದರು. ಆದರೆ ಹಲವಾರು ಗಂಟೆಗಳ ಕರ್ತವ್ಯದ ನಂತರ ನಮಗೆ ದೊರೆಯುತ್ತಿರುವುದು ಇದು, ಸೂಕ್ತ ಆಹಾರ ದೊರೆಯದೇ ಇದ್ದರೆ ಪೊಲೀಸರು ಹೇಗೆ ಕರ್ತವ್ಯ ನಿರ್ವಹಿಸಬಹುದು" ಎಂದು ಆತ ಪ್ರಶ್ನಿಸುತ್ತಾನೆ.
ಆತನ ಕುರಿತು ಫಿರೋಝಾಬಾದ್ ಪೊಲೀಸರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿ ಆತ ಅಶಿಸ್ತಿನ ನಡವಳಿಕೆಯ ಇತಿಹಾಸ ಹೊಂದಿದ್ದಾರೆ, ಅವ್ಯವಹಾರ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ 15 ಬಾರಿ ಶಿಕ್ಷೆಗೊಳಗಾಗಿದ್ದಾರೆ ಎಂದು ತಿಳಿಸಿದೆ. ಈ ನಿರ್ದಿಷ್ಟ ಘಟನೆ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
A UP police constable posted in Firozabad district protests against the quality of food served at the mess in police lines. He was later whisked away. A probe has been ordered. pic.twitter.com/nxspEONdNN
— Piyush Rai (@Benarasiyaa) August 10, 2022
The state of affairs this Constable is indicating is not only true of UP but many parts of India where working conditions of lower constabulary are very poor. Ration allowance is provided, then why is there such a situation? Mismanagement by police mess is not a political issue. pic.twitter.com/97GeNz5icO
— Shesh Paul Vaid (@spvaid) August 11, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.