ಜಮ್ಮುವಿನಲ್ಲಿ ಒಂದೇ ಕುಟುಂಬದ 6 ಮಂದಿ ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವು: ವರದಿ
ಜಮ್ಮು: ಒಂದೇ ಕುಟುಂಬದ ಆರು ಮಂದಿ ಇಂದು ಜಮ್ಮುವಿನ ತಮ್ಮ ಮನೆಯಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ (6 Of Family Found Dead At Home)ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸಕೀನಾ ಬೇಗಂ, ಅವರ ಇಬ್ಬರು ಪುತ್ರಿಯರಾದ ನಸೀಮಾ ಅಖ್ತರ್ ಮತ್ತು ರುಬಿನಾ ಬಾನೋ, ಪುತ್ರ ಝಾಫರ್ ಸಲೀಂ ಹಾಗೂ ಇಬ್ಬರು ಸಂಬಂಧಿಕರಾದ ನೂರ್ ಉಲ್ ಹಬೀಬ್ ಮತ್ತು ಸಜಾದ್ ಅಹ್ಮದ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ.
ಜಮ್ಮುವಿನ ಸಿದ್ರಾ ಪ್ರದೇಶದ ಕುಟುಂಬದವರ ಮನೆಯಲ್ಲಿ ಶವಗಳು ಪತ್ತೆಯಾಗಿವೆ.
ಮೃತದೇಹಗಳನ್ನು ನಗರದ ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಸ್ಥಳಕ್ಕೆ ತಂಡಗಳು ಆಗಮಿಸಿದ್ದು, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story