ದಿಲ್ಲಿ: 1,200 ಕೋ.ರೂ. ಮೌಲ್ಯದ ಮಾದಕ ವಸ್ತು ವಶ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಸೆ. 6: ದಿಲ್ಲಿ ಪೊಲೀಸ್ ವಿಶೇಷ ಘಟಕ ಮಂಗಳವಾರ ಅಪ್ಘಾನಿಸ್ತಾನದ ಇಬ್ಬರು ಪ್ರಜೆಗಳನ್ನು ಬಂಧಿಸಿದೆ ಹಾಗೂ ಅವರಿಂದ 1200 ಕೋ.ರೂ. ಮೌಲ್ಯದ 312.5 ಕಿ.ಗ್ರಾಂ. ಮೆಥಂಫೆಟಮೈನ್ ಹಾಗೂ 10 ಕಿ.ಗ್ರಾಂ. ಅತ್ಯಧಿಕ ಶುದ್ಧತೆಯ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಹೊಸದಿಲ್ಲಿಯ ಕಾಳಿಂದಿ ಕುಂಜ್ ಮೆಟ್ರೋ ಸ್ಟೇಷನ್ ಸಮೀಪದ ಮೀತಾಪುರ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಕಾಬೂಲ್ ನಿವಾಸಿ ಮುಸ್ತಫಾ ಹಾಗೂ ಕಂದಹಾರ್ ನಿವಾಸಿ ರಹಿಮುಲ್ಲಾ ರಹೀಮ್ ಎಂದು ಗುರುತಿಸಲಾಗಿದೆ. ಇಬ್ಬರಲ್ಲೂ ನಿರಾಶ್ರಿತರ ವಿಸಾ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಮಾದಕ ಭಯೋತ್ಪಾದನೆ ಪ್ರಕರಣ. ಇದಕ್ಕೆ ಸಂಬಂಧಿಸಿ ನಾವು ಯುಎಪಿಎ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಈ ಮಾದಕ ವಸ್ತುವನ್ನು ಮೊದಲು ಚೆನ್ನೈಗೆ, ಅಲ್ಲಿಂದ ಲಕ್ನೋಗೆ ಕಳುಹಿಸಲಾಗಿತ್ತು. ಅಂತಿಮವಾಗಿ ದಿಲ್ಲಿಗೆ ಕಳುಹಿಸುವ ಸಂದರ್ಭ ಮಾರ್ಗ ಮಧ್ಯೆ ವಶಪಡಿಸಿಕೊಳ್ಳಲಾಯಿತು ಎಂದು ಅವರು ತಿಳಿಸಿದ್ದಾರೆ.
Next Story