NEET ಫಲಿತಾಂಶ ಪ್ರಕಟ: ರಾಜಸ್ಥಾನದ ತನಿಷ್ಕಾಗೆ ಪ್ರಥಮ ಸ್ಥಾನ, ಕರ್ನಾಟಕದ ಹೃಷಿಕೇಶ್ಗೆ ಮೂರನೇ ಸ್ಥಾನ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ(ಎನ್ಟಿಎ) ಬುಧವಾರ ರಾಷ್ಟ್ರೀಯ ಅರ್ಹತಾ, ಪ್ರವೇಶ ಪರೀಕ್ಷೆ(ನೀಟ್-ಯುಜಿ)2022ರ ಫಲಿತಾಂಶವನ್ನು ಪ್ರಕಟಿಸಿದೆ.
ರಾಜಸ್ಥಾನದ ತನಿಷ್ಕಾ ಪ್ರಥಮ ಸ್ಥಾನ, ದಿಲ್ಲಿಯ ವಸ್ತ ಆಶೀಶ್ ಬಾತ್ರಾ ದ್ವಿತೀಯ ಹಾಗೂ ಕರ್ನಾಟಕದ ಹೃಷಿಕೇಶ್ ನಾಗಭೂಷಣ ಗಂಗುಲೆ ಅವರು ಮೂರನೇ ಸ್ಥಾನ ಪಡೆದಿದ್ದಾರೆ.
► NEET UG 2022 ಫಲಿತಾಂಶ ಡೌನ್ ಲೋಡ್ ಮಾಡುವ ವಿಧಾನ ಹೇಗೆ?
ನೀಟ್ ಅಧಿಕೃತ ವೆಬ್ಸೈಟ್ neet.nta.nic.in ಅಥವಾ ntaresults.nic.in ಗೆ ಭೇಟಿ ನೀಡಿ.
ಮುಖಪುಟದಲ್ಲಿ “NEET UG – 2022 Result 2022” ಲಿಂಕ್ ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ಲಾಗಿನ್ ಐಡಿ, ಜನ್ಮ ದಿನಾಂಕ, ನೋಂದಣಿ ಸಂಖ್ಯೆಯನ್ನು ನಮೂದಿಸಿ. ಆಗ ನಿಮಗೆ ನೀಟ್ ಯುಜಿ ಫಲಿತಾಂಶ ಪರದೆಯ ಮೇಲೆ ಕಾಣಿಸುತ್ತದೆ.
ಅದನ್ನು ಡೌನ್ಲೋಡ್ ಮಾಡಿಕೋಂಡು, ಪ್ರಿಂಟ್ ತೆಗೆದುಕೊಳ್ಳಿ.
Next Story