ಉತ್ತರಪ್ರದೇಶ: ರೈಲು ಬರುತ್ತಿದ್ದಂತೆಯೇ ಹಳಿಯಿಂದ ಮಹಿಳೆಯನ್ನು ರಕ್ಷಿಸಿದ ನೌಕರ
ಫಿರೋಝ್ಬಾದ್: ರೈಲು ಚಲಿಸುವ ಸಂದರ್ಭದಲ್ಲಿ ಮಹಿಳೆಯೋರ್ವಳನ್ನು ರೈಲ್ವೆ ಇಲಾಖೆಯ ನೌಕರ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಉತ್ತರ ಪ್ರದೇಶ ರಾಜ್ಯದ ಫಿರೋಝ್ಬಾದ್ ರೈಲು ನಿಲ್ಧಾಣದಲ್ಲಿ ಸಂಭವಿಸಿದೆ.
ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಹಿಳೆಯೋರ್ವಳು ರೈಲು ಹಳಿ ದಾಟುವ ಸಂದರ್ಭದಲ್ಲಿ ರೈಲು ವೇಗವಾಗಿ ಚಲಿಸುತ್ತಿದ್ದು, ಕ್ಷಣದಲ್ಲೇ ಸಹಾಯಕ್ಕಾಗಿ ಆಕೆ ಕಿರಿಚಿದ್ದನ್ನು ಗಮನಿಸಿದ ರೈಲ್ವೆ ನೌಕರನೋರ್ವ ಆಕೆಯನ್ನು ಟ್ರ್ಯಾಕ್ನಿಂದ ಮೇಲೆತ್ತಿ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆಯ ವೀಡಿಯೊ ವೈರಲ್ ಆಗಿದೆ.
ರೈಲು ಹತ್ತಿರ ಬರುತ್ತಿದ್ದಂತೆಯೇ ಟ್ರ್ಯಾಕ್ನಲ್ಲಿ ಮಹಿಳೆಯೋರ್ವರ ಧ್ವನಿ ಕೇಳಿಸಿತು. ಎದುರಿಗೆ ಬರುತ್ತಿದ್ದ ಮತ್ತೋರ್ವ ರೈಲ್ವೆ ನೌಕರ ಆಕೆಯು ಕಿರುಚಿದ್ದನ್ನು ಗಮನಿಸಿ ಮೇಲೆಕ್ಕೆತ್ತಲು ಧಾವಿಸಿ, ಕ್ಷಣಾರ್ಧದಲ್ಲಿ ಪ್ರಾಣ ಉಳಿಸಿದ್ದಾನೆ ಎಂದು ಪ್ರತ್ಯಕ್ಷ ದರ್ಶಿ ಜಿಆರ್ಪಿ ಪೊಲೀಸ್ ಶಿವಲಾಲ್ ಮೀನಾ ಹೇಳಿದ್ದಾರೆ.
Firozabad: Railway staffer rescued a woman by seconds from getting crushed under the wheels of a speeding train. He was able to get her off the railway track just in time.
— Deepak-Lavania (@dklavaniaTOI) September 9, 2022
Woman's negligence continued as she picked bottle lying at platform edge- inches away from the train. pic.twitter.com/vcGrVO6ysp