ಬಿಜೆಪಿ ನಾಯಕಿಯ ಉಪಸ್ಥಿತಿಯಿಂದಾಗಿ ಜೆಎಲ್ಎಫ್ನ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ಗೈರಾದ ಪ್ಯಾನೆಲಿಸ್ಟ್ಗಳು; ವರದಿ

ಶಾಝಿಯಾ ಇಲ್ಮಿ (PTI)
ಹೊಸದಿಲ್ಲಿ,ಸೆ.15: ಜೈಪುರ ಸಾಹಿತ್ಯ ಉತ್ಸವ (JLF) ನ್ಯೂಯಾರ್ಕ್ನಲ್ಲಿ(New York) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಮೂವರು ಪ್ಯಾನೆಲಿಸ್ಟ್ಗಳು ಬಿಜೆಪಿಯ(BJP) ರಾಷ್ಟ್ರೀಯ ವಕ್ತಾರರಾದ ಶಾಝಿಯಾ ಇಲ್ಮಿ(Shazia Ilmi) ಅವರೊಂದಿಗೆ ವೇದಿಕೆಯನ್ನು ಹಂಚಿಕೊಳ್ಳಲು ಇಷ್ಟವಿಲ್ಲದೆ ಗೈರಾಗಿರುವುದು ವರದಿಯಾಗಿದೆ.
ಕಾರ್ಯಕ್ರಮದಿಂದ ಹಿಂದೆ ಸರಿದ ಪ್ಯಾನೆಲಿಸ್ಟ್ಗಳಲ್ಲಿ ಲೇಖಕಿಯರಾದ ಮೇರಿ ಬ್ರೆನ್ನರ್ ಮತ್ತು ಆ್ಯಮಿ ವಾಲ್ಡಮನ್ ಸೇರಿದ್ದಾರೆ. ಕಾರ್ಯಕ್ರಮಕ್ಕೆ ತಮ್ಮ ಗೈರುಹಾಜರಿಯ ಮೂಲಕ ಬಿಜೆಪಿಯ ನೀತಿಗಳನ್ನು ಪ್ರತಿಭಟಿಸುವಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ಲೇಖಕರು ಕರೆಯನ್ನು ನೀಡಿದ್ದ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಜೆಎಲ್ಎಫ್ ಕಾರ್ಯಕ್ರಮವು ಅಮೆರಿಕದಲ್ಲಿ ಹಿಂದುತ್ವವನ್ನು ‘ಸಾಮಾನ್ಯಗೊಳಿಸುತ್ತಿದೆ’ ಎಂದು ಕಾರ್ಯಕರ್ತರು ಹೇಳಿದ್ದರು ಎಂದು thewire.in ವರದಿ ಮಾಡಿದೆ.
ನ್ಯೂಯಾರ್ಕ್ ಸೇರಿದಂತೆ ಭಾರತದ ಹೊರಗೂ ಕಾರ್ಯಕ್ರಮಗಳನ್ನು ನಡೆಸುವ ಜೆಎಲ್ಎಫ್ ಬುಧವಾರದ ಚರ್ಚಾಗೋಷ್ಠಿಯ ಪ್ಯಾನೆಲಿಸ್ಟ್ಗಳ ಪಟ್ಟಿಯಲ್ಲಿ ಇಲ್ಮಿಯವರನ್ನು ಸೇರಿಸಿತ್ತು ಮತ್ತು ಅವರು ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಭಾಷಣಕಾರರೂ ಆಗಿದ್ದರು. ಸೆ.12ರಿಂದ 14ರವರೆಗೆ ನ್ಯೂಯಾರ್ಕ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆದಾಗ್ಯೂ ಪ್ಯಾನೆಲಿಸ್ಟ್ಗಳು ನಿಜಕ್ಕೂ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದರೇ ಎಂಬ ಬಗ್ಗೆ ಜೆಎಲ್ಎಫ್ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ಜೆಎಲ್ಎಫ್ ವೆಬ್ಸೈಟ್ನಲ್ಲಿ ಪ್ಯಾನೆಲಿಸ್ಟ್ಗಳ ಪಟ್ಟಿಯಲ್ಲಿ ಬುಧವಾರವೂ ಬ್ರೆನ್ನರ್ ಮತ್ತು ವಾಲ್ಡಮನ್ ಅವರ ಹೆಸರುಗಳಿದ್ದವು. ವಿಷಯವನ್ನು ಬಲ್ಲ ಬ್ರಿಟಿಷ್-ಭಾರತೀಯ ಲೇಖಕ ಆತಿಷ್ ತಾಸೀರ್ ಅವರು,ಬ್ರೆನ್ನರ್ ಮತ್ತು ವಾಲ್ಡಮನ್ ಅವರ ಗೈರುಹಾಜರಿಯನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
ಕಾರ್ಯಕ್ರಮದಿಂದ ಹಿಂದೆ ಸರಿದವರು ಉತ್ಸವದಲ್ಲಿಯ ಜನರೊಂದಿಗೆ ಸಂಬಂಧಗಳನ್ನು ಹೊಂದಿರುವುದರಿಂದ ರಾಜಕೀಯ ಹೇಳಿಕೆಯನ್ನು ನೀಡಲು ಭಯಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ತಾಸೀರ್ ಅವರು ಟೈಮ್ ಮ್ಯಾಗಝಿನ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿ ಲೇಖನವೊಂದನ್ನು ಪ್ರಕಟಿಸಿದ ಬಳಿಕ ಅವರ ಭಾರತೀಯ ಸಾಗರೋತ್ತರ ಪ್ರಜೆ ಕಾರ್ಡ್ನ್ನು 2019ರಲ್ಲಿ ಹಿಂದೆಗೆದುಕೊಳ್ಳಲಾಗಿತ್ತು.
ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳನ್ನು ಮಾಡಿರುವ ಹಲವಾರು ಗೌರವಾನ್ವಿತರು ಮತ್ತು ಬುದ್ಧಿಜೀವಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೆಚ್ಚಿನ ಭಾಷಣಕಾರರನ್ನು ನಂಬಿಸಲಾಗಿತ್ತು ಎಂದು ತಾಸೀರ್ ತಿಳಿಸಿದರು.
ಬೆಳವಣಿಗೆಗೆ ಪ್ರತಿಕ್ರಿಯಿಸಿದ ಇಲ್ಮಿ,ಅದು ಅತ್ಯಂತ ಕೆಟ್ಟ ಅಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಹೇಳಿದರಾದರೂ, ಕಾರ್ಯಕ್ರಮದಿಂದ ದೂರವುಳಿಯುವುದು ಸಂಪೂರ್ಣವಾಗಿ ಅವರ ಆಯ್ಕೆಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಪಕ್ಷಗಳ ಭಾರೀ ವಿರೋಧದ ಮಧ್ಯೆ ಮತಾಂತರ ನಿಷೇಧ ವಿಧೇಯಕಕ್ಕೆ ಪರಿಷತ್ತಿನಲ್ಲಿ ಅಂಗೀಕಾರ







