ಪ್ರಶಸ್ತಿ ನೀಡುವಾಗ ಫೋಟೊಕ್ಕಾಗಿ ಫುಟ್ಬಾಲ್ ಸ್ಟಾರ್ ಸುನೀಲ್ ಛೆಟ್ರಿಯನ್ನು ತಳ್ಳಿದ ಪ.ಬಂಗಾಳದ ರಾಜ್ಯಪಾಲ!
-

ಹೊಸದಿಲ್ಲಿ: ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ರವಿವಾರ ನಡೆದ ಡುರಾಂಡ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ(Durand Cup Football Tournament) ಸುನೀಲ್ ಛೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ 2-1 ಗೋಲುಗಳಿಂದ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.
ಆದಾಗ್ಯೂ, ಪಂದ್ಯದ ನಂತರದ ಕೆಲವು ಅಹಿತಕರ ಕ್ಷಣಗಳ ಎರಡು ವೀಡಿಯೊಗಳು ರೋಮಾಂಚಕ ಫುಟ್ಬಾಲ್ ಆಟಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗಿವೆ.
ಮೊದಲ ವೀಡಿಯೊದಲ್ಲಿ ಪಶ್ಚಿಮ ಬಂಗಾಳದ ಗವರ್ನರ್ ಲಾ ಗಣೇಶನ್ (West Bengal Governor La Ganesan )ಅವರು ಪಂದ್ಯದ ನಂತರದ ಪ್ರಶಸ್ತಿ ಸಮಾರಂಭದಲ್ಲಿ ಫೋಟೋ ಅವಕಾಶಕ್ಕಾಗಿ ಸುನೀಲ್ ಛೆಟ್ರಿಯನ್ನು (Sunil Chhetri)ದೂರ ತಳ್ಳಿರುವುದು ಕಂಡುಬಂದಿದೆ.
ಎರಡನೇ ವೀಡಿಯೊದಲ್ಲಿ, ಫೈನಲ್ ಪಂದ್ಯದಲ್ಲಿ ಗೋಲು ಗಳಿಸಿದ ಶಿವಶಕ್ತಿ ನಾರಾಯಣನ್ ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭದ ವೇಳೆ ಮತ್ತೊಬ್ಬ ಅತಿಥಿ ಪಕ್ಕಕ್ಕೆ ತಳ್ಳಿರುವುದು ಕಂಡುಬಂದಿದೆ.
ಟ್ರೋಫಿಗಳನ್ನು ಪ್ರದಾನಿಸಲು ಬಂದ ಅತಿಥಿಗಳು ಕ್ರೀಡಾಪಟುಗಳಿಗಿಂತ ಹೆಚ್ಚು ಗಮನ ಸೆಳೆಯಲು ಉತ್ಸುಕರಾಗಿದ್ದಾರೆ ಎನ್ನುವುದು ಈ ಎರಡು ವೀಡಿಯೊಗಳು ತೋರಿಸುತ್ತಿವೆ.
40,000 ಕ್ಕೂ ಹೆಚ್ಚು ಜನರು ವೀಡಿಯೊಗಳನ್ನು ವೀಕ್ಷಿಸಿದ್ದಾರೆ ಹಾಗೂ ಅನೇಕ ಫುಟ್ಬಾಲ್ ಅಭಿಮಾನಿಗಳು ಇದರಿಂದ ಆಘಾತಕ್ಕೊಳಗಾಗಿದ್ದೇವೆ ಎಂದು ಕಾಮೆಂಟ್ ಮಾಡಿದ್ದಾರೆ.
ಭಾರತದ ಅಗ್ರ ಫುಟ್ಬಾಲ್ ಆಟಗಾರರೊಂದಿಗೆ ದುರ್ವರ್ತನೆಯನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು "ಅತ್ಯಂತ ಅವಮಾನಕರ" ಎಂದು ಕರೆದಿದ್ದಾರೆ.
"ರಾಜಕಾರಣಿಗಳು ಭಾರತದ ನೈಜ ಹಾಗೂ ಯುವ ಪ್ರತಿಭೆಗಳ ಮುಂದೆ ನಿಲ್ಲಲು ಬಯಸುತ್ತಾರೆ" ಎಂದು ಒಬ್ಬ ಬಳಕೆದಾರರು ಹೇಳಿದ್ದಾರೆ.
"ಈ ರಾಜಕಾರಣಿಗಳು ತಾವು ಏನೆಂದು ತಿಳಿದುಕೊಂಡಿದ್ದಾರೋ ಎಂದು ಗೊತ್ತಿಲ್ಲ" ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
ಯುವ ಆಟಗಾರ ಎನ್. ಶಿವಶಕ್ತಿ ಹಾಗೂ ಅಲನ್ ಕೋಸ್ಟಾ ಮೊದಲ ಹಾಗೂ ದ್ವಿತೀಯಾರ್ಧದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಬೆಂಗಳೂರು ಎಫ್‌ಸಿ ಡುರಾಂಡ್ ಕಪ್ ಫೈನಲ್‌ನಲ್ಲಿಜಯ ಸಾಧಿಸಿತು
Ladies & gentlemen, bringing you Shri La. Ganeshan, honorable Governor of West Bengal. #DurandCup
— Debapriya Deb (@debapriya_deb) September 18, 2022
The high-headedness is audacious. Not expected of a respectable figure, @LaGanesan. A public apology surely won't be too much to ask for. #IndianFootballpic.twitter.com/aEq4Yq6a6R
This is what happened with shivshakti minutes before Chhetri. pic.twitter.com/TZmLP93Sdj
— Akansh (@AkanshSai) September 18, 2022
Sunil Chhetri and Indian football both deserve an apology by #LaGanesan https://t.co/439gEXRT1p
— Clayton Barretto (@ClaytonBarretto) September 19, 2022
I'm Pretty Sure If It Was A Cricket Player Instead of Sunil Chhetri Things Would Have been different #chandigarhuniversity #SunilChhetri #AtletiRealMadrid #HindiDiwas #HindusUnderAttack #HindusUnderAttackInUK #football #chandigarhuniversitymms #Indian #indianfootball pic.twitter.com/Ft0ZwXaJqT
— NinjaMan_2094 (@Ninjaman2094) September 19, 2022
Five seconds that show you everything that's wrong with Indian sport. It's seems that they won the Durand Cup, not Sunil Chhetri and Bengaluru FC! https://t.co/Bglws5dvyd
— Prashant Dhawan (@DhawanPrasant) September 19, 2022
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.