ಉತ್ತರ ಪ್ರದೇಶ: ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ ನೀಡಿದ ವೀಡಿಯೊ ವೈರಲ್
ಆದಿತ್ಯನಾಥ್ ಸರಕಾರದ ವಿರುದ್ದ ಭಾರೀ ಆಕ್ರೋಶ
ಸಹರಾನ್ಪುರ: ಉತ್ತರ ಪ್ರದೇಶದ ಕಬಡ್ಡಿ ಆಟಗಾರ್ತಿಯರಿಗೆ ಶೌಚಾಲಯದಲ್ಲಿ ಊಟ ನೀಡಿರುವ ಕೆಲ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದು ರಾಜ್ಯ ಸರಕಾರದ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ ಎಂದು NDTV ವರದಿ ಮಾಡಿದೆ.
ಈಗ ವ್ಯಾಪಕ ಪ್ರಚಾರದಲ್ಲಿರುವ ಈ ವೀಡಿಯೊಗಳನ್ನು ಸೆಪ್ಟೆಂಬರ್ 16 ರಂದು ಸಹರಾನ್ಪುರದಲ್ಲಿ ಬಾಲಕಿಯರ 17 ವರ್ಷದೊಳಗಿನವರ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯ ಸಂದರ್ಭದಲ್ಲಿ ಕೆಲವು ಆಟಗಾರ್ತಿಯರು ಚಿತ್ರೀಕರಿಸಿದ್ದರು ಎಂದು ವರದಿಯಾಗಿದೆ.
1-ನಿಮಿಷದ ವೀಡಿಯೋದಲ್ಲಿ ಶೌಚಾಲಯದ ನೆಲದ ಮೇಲೆ ಇರಿಸಲಾದ ಅನ್ನದ ತಟ್ಟೆಯಿಂದ ಆಟಗಾರ್ತಿಯರು ಸ್ವತಃ ಅನ್ನ ಹಾಗೂ ತರಕಾರಿಗಳನ್ನು ಬಡಿಸಿಕೊಂಡು ಶೌಚಾಲಯದಿಂದ ಹೊರ ಬರುವುದನ್ನು ಕಾಣಬಹುದು.
ಸಹರಾನ್ಪುರದ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಆರೋಪಗಳನ್ನು ತಳ್ಳಿಹಾಕಿದರು ಮತ್ತು ಕೆಲವು "ಅನಿವಾರ್ಯ ಕಾರಣಗಳಿಂದ" ಈಜುಕೊಳದ ಬಳಿ ಆಹಾರವನ್ನು ಬೇಯಿಸಿ ಬೇರೊಂದು ಕೋಣೆಯಲ್ಲಿ' ಅದನ್ನು ಇರಿಸಲಾಗಿತ್ತು ಎಂದು ಹೇಳಿದರು.
यूपी की कबड्डी खेलने वाली बेटियों को टॉयलेट में खाना परोसा गया।
— Congress (@INCIndia) September 20, 2022
झूठे प्रचार पर करोड़ों खर्च करने वाली BJP सरकार के पास हमारे खिलाड़ियों के लिए अच्छी व्यवस्था करने के पैसे नहीं हैं।
धिक्कार है! pic.twitter.com/UazJvCrWPB