ನರೋಡಾ ಗಾಮ್ ಗಲಭೆ: ಆರೋಪಿ ಮಾಯಾ ಕೊಡ್ನಾನಿಗೆ ಗುಜರಾತ್ ಹೊರಗೆ ತೆರಳಲು ಮತ್ತೆ ಅನುಮತಿಸಿದ ನ್ಯಾಯಾಲಯ

ಮಾಯಾ ಕೊಡ್ನಾನಿ (File Photo: PTI)
ಅಹ್ಮದಾಬಾದ್: ಗುಜರಾತ್ನಲ್ಲಿ 2002ರಲ್ಲಿ ನಡೆದ ನರೋಡಾ ಗಾಮ್ ಗಲಭೆಗಳ(Naroda Gam riots) ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಬಿಜೆಪಿ(BJP) ಸಚಿವೆ ಮಾಯಾ ಕೊಡ್ನಾನಿ (Maya Kodnani) ಅವರಿಗೆ ಗುಜರಾತ್ನ ಹೊರಗೆ ಆರು ತಿಂಗಳು ತೆರಳಲು ಅಹ್ಮದಾಬಾದ್ನ ನ್ಯಾಯಾಲಯ ಮತ್ತೆ ಅನುಮತಿಸಿದೆ. ಪಾಸ್ಪೋರ್ಟ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಅದನ್ನು ನವೀಕರಿಸಲೂ ವಿಚಾರಣಾ ನ್ಯಾಯಾಲಯ ಅವರಿಗೆ ಅನುಮತಿಸಿದೆ ಎಂದು indianexpress ವರದಿ ಮಾಡಿದೆ.
ಮೇ 2009ರಲ್ಲಿ ಜಾಮೀನು ನೀಡುವ ವೇಳೆ ನ್ಯಾಯಾಲಯ ವಿಧಿಸಿದ ಷರತ್ತುಗಳಲ್ಲಿ ಆಕೆ ಗುಜರಾತ್ ಹೊರಗೆ ಪೂರ್ವಾನುಮತಿಯಿಲ್ಲದೆ ಪ್ರಯಾಣಿಸಬಾರದು ಎಂಬುದಾಗಿತ್ತು. ಆದರೆ ಮುಂದೆ ಕೊಡ್ನಾನಿ ಅವರು ಸಲ್ಲಿಸಿದ್ದ ಹಲವು ಅರ್ಜಿಗಳ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆಕೆಗೆ ಷರತ್ತುಗಳಲ್ಲಿ ಸಡಿಲಿಸುತ್ತಲೇ ಆಕೆಗೆ ಗುಜರಾತ್ ಹೊರಗೆ ಪ್ರಯಾಣಿಸಲು ಅನುಮತಿಸಿತ್ತು. ಈ ಹಿಂದೆ ಈ ವರ್ಷದ ಮಾರ್ಚ್ 31ರಂದು ಷರತ್ತಿನಲ್ಲಿ ಸಡಿಲಿಕೆ ನೀಡಿ ಎಪ್ರಿಲ್ 1 ರಿಂದ ಆರು ತಿಂಗಳು ನಿಯಮಗಳಲ್ಲಿ ಸಡಿಲಿಕೆ ನೀಡಲಾಗಿತ್ತು.
ಖಿನ್ನತೆಯ ಸಮಸ್ಯೆಯಿಂದಾಗಿ ಕುಟುಂಬ ಸದಸ್ಯರೊಂದಿಗೆ ಗುಜರಾತ್ ಹೊರಗೆ ತೀರ್ಥಯಾತ್ರೆಗೆ ಹೋಗಲು ಹಾಗೂ ಗುಜರಾತ್ ಹೊರಗೆ ಸಮಾರಂಭಗಳಲ್ಲಿ ಭಾಗವಹಿಸಲು ಹಾಗೂ ಸಂಬಂಧಿಕರನ್ನು ಭೇಟಿಯಾಗಲು ಕೋರಿ ಅವರು ಜಾಮೀನು ಷರತ್ತುಗಳಲ್ಲಿ ಪ್ರತಿ ಬಾರಿ ಸಡಿಲಿಕೆ ಕೋರುತ್ತಿದ್ದರು.
ಮೇಲಾಗಿ ಪ್ರಾಸಿಕ್ಯೂಶನ್ ಕೂಡ ಆಕೆಯ ಮನವಿಗಳಿಗೆ ಆಕ್ಷೇಪ ಸಲ್ಲಿಸದೇ ಇದ್ದುದರಿಂದ ಆಕೆಗೆ ನ್ಯಾಯಾಲಯ ವಿನಾಯಿತಿ ನೀಡುತ್ತಾ ಬಂದಿದೆ.
ಇದನ್ನೂ ಓದಿ: ಜಗಳದ ನಡುವೆ ಕಾರು ಢಿಕ್ಕಿ ಹೊಡೆದರೂ ಮತ್ತೆ ಜಗಳಕ್ಕಿಳಿದ ವಿದ್ಯಾರ್ಥಿಗಳು: ವೀಡಿಯೋ ವೈರಲ್







