ಅಮೆರಿಕ ಡಾಲರ್ ವಿರುದ್ಧ ಇತರ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿ ಉತ್ತಮವಾಗಿದೆ: ನಿರ್ಮಲಾ ಸೀತಾರಾಮನ್
Photo:PTI
ಹೊಸದಿಲ್ಲಿ: ಅಮೆರಿಕದ ಡಾಲರ್ ವಿರುದ್ಧ ಇತರ ಕರೆನ್ಸಿಗಳಿಗೆ ಹೋಲಿಸಿದರೆ ರೂಪಾಯಿಯು "ಉತ್ತಮವಾಗಿದೆ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman)ಶನಿವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
"ಭಾರತೀಯ ಕರೆನ್ಸಿ ಇತರ ಕರೆನ್ಸಿಗಳಂತೆ ಏರಿಳಿತ ಅಥವಾ ಚಂಚಲತೆಗೆ ಒಳಗಾಗದೇ ಉಳಿದಿದೆ " ಎಂದು ಸೀತಾರಾಮನ್ ಪುಣೆಯಲ್ಲಿ ಕೇಂದ್ರ ಪ್ರಾಯೋಜಿತ ಯೋಜನೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು
ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ನಿರ್ಮಾಲಾ ಹೇಳಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ
ಡಾಲರ್ ಎದುರು ರೂಪಾಯಿ ಮೌಲ್ಯವು ದಾಖಲೆಯ 81.23 ಕ್ಕೆ ಕುಸಿದ ಒಂದು ದಿನದ ನಂತರ ಸೀತಾರಾಮನ್ ಈ ಹೇಳಿಕೆ ನೀಡಿದ್ದಾರೆ.
Next Story