ಮುಂಬೈ: 1476 ಕೋ.ರೂ. ಮೌಲ್ಯದ ಮಾದಕ ದ್ರವ್ಯ ವಶ
Photo :PTI
ಮುಂಬೈ, ಅ. 9: ಮುಂಬೈಯಲ್ಲಿ ಆರಂಜ್ಗಳನ್ನು ಕೊಂಡೊಯ್ಯುತ್ತಿದ್ದ ಟ್ರಕ್ನಿಂದ 1476 ಕೋ. ರೂ. ಮೌಲ್ಯದ ಮೆಥಂಫೆಟಮೈನ್ ಹಾಗೂ ಕೊಕೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಂದಾಯ ಬೇಹುಗಾರಿಕೆ ನಿರ್ದೇಶನಾಲಯ (ಡಿಆರ್ಐ ) ಮುಂಬೈಯ ವಾಶಿಯಲ್ಲಿ ಟ್ರಕ್ ಅನ್ನು ತಡೆದು ತಪಾಸಣೆ ನಡೆಸಿದಾಗ ಈ ಮಾದಕ ದ್ರವ್ಯಗಳು ಪತ್ತೆಯಾಗಿವೆ.
ವೆಲೆನ್ಸಿಯಾ ಆರೆಂಜ್ಗಳ ಪೆಟ್ಟಿಗೆಯಲ್ಲಿ ಬಚ್ಚಿಡಲಾಗಿದ್ದ 198 ಕಿ.ಗ್ರಾಂ ಮೆಥಂಫೆಟಮೈನ್ ಹಾಗೂ 9 ಕಿ.ಗ್ರಾಂ. ಕೊಕೈನ್ ಪತ್ತೆ ಮಾಡಲಾಗಿದೆ. ಅಲ್ಲದೆ, ಸರಕಿನ ಆಮದುದಾರನನ್ನು ಬಂಧಿಸಲಾಗಿದೆ ಎಂದು ಡಿಆರ್ಐನ ಹೇಳಿಕೆ ತಿಳಿಸಿದೆ.
“ವೆಲೆನ್ಸಿಯಾ ಆರೆಂಜಗಳನ್ನು ಕೊಂಡೊಯ್ಯುತ್ತಿದ್ದ ಪೆಟ್ಟಿಗೆಗಳಲ್ಲಿ ಬಚ್ಚಿಡಲಾಗಿದ್ದ ದೊಡ್ಡ ಪ್ರಮಾಣದ ಮಾದಕ ದ್ರವ್ಯ ಪತ್ತೆಯಾಗಿದೆ. ಸರಕಿನ ಆಮದುದಾರನನ್ನು ಬಂಧಿಸಿದ್ದೇವೆ ಹಾಗೂ ವಿಚಾರಣೆ ನಡೆಸುತ್ತಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ’’ ಎಂದು ಅದು ಹೇಳಿದೆ.
Next Story