ಮಹಾರಾಷ್ಟ್ರ: ಕುಸಿದು ಬಿದ್ದು ಯುವಕ ಸಾವು ಆಘಾತದಿಂದ ತಂದೆ ಕೂಡ ಸಾವು
Photo:PTI
ಪಾಲ್ಘಾರ್, ಅ. 3: ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ವಿರಾರ್ ಪಟ್ಟಣದಲ್ಲಿ ನಡೆದ ಗಾರ್ಭಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ಸಂದರ್ಭ ೩೫ ವರ್ಷದ ಯುವಕನೋರ್ವ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿರಾರ್ನ ಗ್ಲೋಬಲ್ ಸಿಟಿ ಸಂಕೀರ್ಣದಲ್ಲಿ ನಡೆದ ಗಾರ್ಭಾ ಕಾಯಕ್ರಮದ ಸಂದರ್ಭ ಶನಿವಾರ ಹಾಗೂ ರವಿವಾರ ಮಧ್ಯದ ರಾತ್ರಿ ನೃತ್ಯ ಮಾಡುತ್ತಿದ್ದ ಮನೀಶ್ ನರಪ್ಜಿ ಸೋನಿಗ್ರಾ ಕುಸಿದು ಬಿದ್ದ ಎಂದು ವಿರಾರ್ನ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಮನೀಶ್ನನ್ನು ಆತನ ತಂದೆ ನರಪ್ಜಿ ಸೋನಿಗ್ರ ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಘೋಷಿಸಿದರು. ಮಗನ ಸಾವಿನ ಸುದ್ದಿ ಕೇಳುತ್ತಲೇ ನರಪ್ಜಿ ಸೋನಿಗ್ರ (66) ಅವರು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಆಕಸ್ಮಿಕ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
Next Story