VIDEO: ಮನೆಯೊಳಗೆ ನುಗ್ಗಿ ಸುತ್ತಾಡಿದ ಚಿರತೆ!
Photo:NDTV
ಮುಂಬೈ: ಮಹಾರಾಷ್ಟ್ರದ ಸತಾರಾದಲ್ಲಿರುವ ಕುಟುಂಬವೊಂದು ದುರ್ಗಾ ಮೂರ್ತಿ ವಿಸರ್ಜನೆಗೆ ತೆರಳಿ ಗುರುವಾರ ರಾತ್ರಿ ಮನೆಗೆ ವಾಪಸಾದಾಗ ಮನೆಯೊಳಗಿನ ಅತಿಥಿ ಕಂಡು ಬೆಚ್ಚಿಬಿದ್ದಿದ್ದಾರೆ.
ದುರ್ಗಾ ಮೂರ್ತಿ ವಿಸರ್ಜನೆಗೆ ಮನೆಯವರೆಲ್ಲರೂ ತೆರಳಿದ್ದ ಸಂದರ್ಭದಲ್ಲಿ ಚಿರತೆಯು ಕೋಯಾನಗರದ ಮನೆಯೊಳಗೆ ನುಗ್ಗಿದೆ. ಮನೆಯವರು ಮನೆಯೊಳಗೆ ಕಾಲಿಟ್ಟಾಗ ಚಿರತೆ ಕೋಣೆಯೊಂದರ ಬಾಗಿಲಲ್ಲಿ ಕುಳಿತಿತ್ತು. ಚಿರತೆಯನ್ನು ಕಂಡು ಬೆಚ್ಚಿಬಿದ್ದ ಮನೆಯವರು ಓಡಿಬಂದು ಪ್ರವೇಶ ದ್ವಾರಕ್ಕೆ ಬೀಗ ಹಾಕಿ ಚಿರತೆಯನ್ನು ಕೂಡಿ ಹಾಕಿದರು.
ಸುದ್ದಿ ತಿಳಿದ ಜನರ ಗುಂಪು ಮನೆಯ ಸುತ್ತಲೂ ಜಮಾಯಿಸಿತು ಹಾಗೂ ಅನೇಕ ಮಂದಿ ಚಿರತೆ ಮನೆಯೊಳಗೆ ಸುತ್ತಾಡುತ್ತಿರುವ ವೀಡಿಯೊ ಸೆರೆ ಹಿಡಿದರು.
ಅರಣ್ಯ ಇಲಾಖೆ ತಂಡಗಳಿಗೆ ಚಿರತೆಯ ಕುರಿತು ಮಾಹಿತಿ ನೀಡಲಾಗಿದ್ದು, ನಂತರ ಚಿರತೆಯನ್ನು ಸೆರೆ ಹಿಡಿಯಲಾಯಿತು ಎಂದು ವರದಿಯಾಗಿದೆ.
Watch: Leopard Enters Maharashtra House, Roams Around https://t.co/ThgayYMr6f pic.twitter.com/1LHZy4rtNh
— NDTV (@ndtv) October 7, 2022
Next Story