ಮತ್ತೆ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ಆಮಿರ್ ಖಾನ್: ಜಾಹಿರಾತಿನ ಕುರಿತು ವಿವಾದ
-

ಹೊಸದಿಲ್ಲಿ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಮತ್ತು ನಟಿ ಕಿಯಾರಾ ಅಡ್ವಾಣಿ ಅವರನ್ನು ಒಳಗೊಂಡ ಬ್ಯಾಂಕ್ ಜಾಹೀರಾತೊಂದು ಬಲಪಂಥೀಯರ ಕೆಂಗಣ್ಣಿಗೆ ಗುರಿಯಾಗಿದೆ. ಜಾಹಿರಾತಿನಲ್ಲಿ ಭಾರತೀಯ ಸಂಸ್ಕೃತಿಗಳನ್ನು ಅಗೌರವಿಸಲಾಗಿದೆ ಎಂದು ಜಾಹಿರಾತುದಾರ ಬ್ಯಾಂಕ್ ಹಾಗೂ ನಟ-ನಟಿಯರನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗುತ್ತಿದೆ.
#AamirKhan_Insults_HinduDharma ಎಂದು ಹಿಂದುತ್ವವಾದಿಗಳು ಟ್ವಿಟರಿನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದು, ಆಮಿರ್ ಖಾನ್ ಹಿಂದೂ ಧರ್ಮದ ಅವಹೇಳನ ಮಾಡಿದ್ದಾರೆಂದು ಆರೋಪಿಸುತ್ತಿದ್ದಾರೆ.
ಜಾಹಿರಾತಿನಲ್ಲಿ ಆಮಿರ್ ಖಾನ್ ಮತ್ತು ಕಿಯಾರ ಅಡ್ವಾಣಿ ವಧು-ವರರಂತೆ ಕಾಣಿಸಿಕೊಂಡಿದ್ದು, ತಮ್ಮ ಮದುವೆಯ ಬಳಿಕ ವಧುವಿನ ಮನೆಗೆ ಬರುವಂತೆ ತೋರಿಸಲಾಗಿದೆ. 'ಬಿದಾಯಿ' ಸಮಯದಲ್ಲಿ ಇಬ್ಬರೂ ಅಳಲಿಲ್ಲ ಎಂದು ಚರ್ಚಿಸುವ ದಂಪತಿಗಳು, ಸಾಂಪ್ರದಾಯಿಕ ಪದ್ಧತಿಗೆ ವಿರುದ್ಧವಾಗಿ ವಧುವಿನ ಮನೆಗೆ ತಲುಪುವುದನ್ನು ಮತ್ತು ವರನು ಮನೆಗೆ ಮೊದಲ ಹೆಜ್ಜೆ ಇಡುವುದನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ.
ಇದು ಹಿಂದುತ್ವವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ನಡುವೆ, ಇದಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಪ್ರತಿಕ್ರಿಯಿಸಿದ್ದು, ಆಮೀರ್ ಖಾನ್ ಅವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಜಾಹೀರಾತುಗಳಿಂದ ದೂರವಿರಬೇಕು ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮಿಶ್ರಾ, ಅಮೀರ್ ಖಾನ್ ಭಾರತೀಯ ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಜಾಹೀರಾತುಗಳನ್ನು ಮಾಡಬೇಕು ಎಂದು ಹೇಳಿದರು.
"ನಾನು ದೂರನ್ನು ಸ್ವೀಕರಿಸಿದ ನಂತರ ನಟ ಅಮೀರ್ ಖಾನ್ ಅವರ ಖಾಸಗಿ ಬ್ಯಾಂಕ್‌ನ ಜಾಹೀರಾತನ್ನು ನೋಡಿದ್ದೇನೆ. ಭಾರತೀಯ ಸಂಪ್ರದಾಯಗಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಜಾಹೀರಾತುಗಳನ್ನು ಮಾಡುವಂತೆ ನಾನು ಅವರನ್ನು ವಿನಂತಿಸುತ್ತೇನೆ. ನಾನು ಅದನ್ನು ಸೂಕ್ತವೆಂದು ಪರಿಗಣಿಸುವುದಿಲ್ಲ. ಭಾರತೀಯ ಸಂಪ್ರದಾಯಗಳು ಮತ್ತು ದೇವತೆಗಳ ಬಗ್ಗೆ ಇಂತಹ ವಿಷಯಗಳು ಬರುತ್ತಲೇ ಇರುತ್ತವೆ, ವಿಶೇಷವಾಗಿ ಅಮೀರ್ ಖಾನ್ ಬಗ್ಗೆ. ನಿರ್ದಿಷ್ಟ ಧರ್ಮದ ಭಾವನೆಗಳಿಗೆ ಇಂತಹ ಕೃತ್ಯಗಳಿಂದ ನೋವುಂಟುಮಾಡುತ್ತದೆ. ಅವರು ಯಾರ ಭಾವನೆಗಳನ್ನು ನೋಯಿಸಲು ಅನುಮತಿಸುವುದಿಲ್ಲ ಎಂದು ನಾನು ನಂಬುತ್ತೇನೆ" ಎಂದು ಅವರು ಹೇಳಿದರು.
Twitterati slams Aamir Khan for AU Bank ad !
— दिलीप निराला (Dilip Nirala) (@niraladilip2) October 12, 2022
Exposes Hypocrisy of Aamir Khan yet again !
Habitual offender mocking Hindu gods & traditions time and again !#AamirKhan_Insults_HinduDharma pic.twitter.com/V6IJ2amquN
Shame On #AuBank#AamirKhan_Insults_HinduDharma
— Dr. Prachi Sadhvi (@Sadhvi_prachi) October 12, 2022
Retweet If You Boycott . @aubankindia pic.twitter.com/yxCioMCgbr
We completely boycott Aamir Khan and au bank, who make fun of Hindu religion, today and now.
— Pravin Giri (@PravinG10742068) October 12, 2022
If it is not closed today, then from today we will close our bank accounts.@aubankindia@AAMIRKHANFANS#Aamirkhan_Insults_HinduDharma pic.twitter.com/BQWfnjS8Q8
#Aamirkhan_Insults_HinduDharma by doing ads which mock Hindu traditions very often...
— Siyaram Saha (@srsahacls) October 12, 2022
Will ever dare to do any ads pertaining to Hijab, Burqua, Triple Talaq, Halala...@aubankindia please refrain from doing such ads interfering with Hindu culture... pic.twitter.com/Zps6X7HZxr
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.