ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಅಳಿಯ ರಿಷಿ ಸುನಕ್ ಕುರಿತು ಪ್ರತಿಕ್ರಿಯಿಸಿದ ನಾರಾಯಣಮೂರ್ತಿ
ನಾರಾಯಣಮೂರ್ತಿ (PTI) / ರಿಷಿ ಸುನಕ್ (Twitter/@ajplus)
ಹೊಸದಿಲ್ಲಿ: ಬ್ರಿಟನ್ (Britain) ಪ್ರಧಾನಿಯಾಗಿ ಕನ್ಸರ್ವೇಟಿವ್ ಪಾರ್ಟಿ(Conservative Party)ಯಿಂದ ನಿಯೋಜಿತರಾಗಿರುವ ರಿಷಿ ಸುನಕ್ (Rishi Sunak) ಅವರ ಬಗ್ಗೆ ಪ್ರತಿಕ್ರಿಯೆ ನೀಡಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ (Narayana Murthy), ಬ್ರಿಟನ್ ಪ್ರಧಾನಿ ಹುದ್ದೆಗೆ ಆಯ್ಕೆಯಾದ ರಿಷಿ ಸುನಕ್ ಅವರ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ.
ಬ್ರಿಟನ್ ನ ಬ್ರಿಟನ್ನ ಅತ್ಯಂತ ಕಿರಿಯ ಪ್ರಧಾನಿ ಸಹಿತ ಹಲವು ದಾಖಲೆಗಳನ್ನು ನಿರ್ಮಿಸಿದ ಅಳಿಯ ರಿಷಿ ಸುನಕ್ ಗೆ ಅಭಿನಂದನೆ ಸಲ್ಲಿಸಿ, ಶುಭ ಹಾರೈಸಿದ ಅವರು, ಬ್ರಿಟನ್ ಜನತೆಗೆ ಉತ್ತಮವಾದುದನ್ನೇ ಮಾಡುತ್ತಾರೆ ಎಂಬ ಭರವಸೆ ನಮಗಿದೆ ಎಂದು ಹೇಳಿದ್ದಾರೆ.
2009 ರಲ್ಲಿ ನಾರಾಯಣಮೂರ್ತಿ ಅವರ ಮಗಳು ಅಕ್ಷತಾರನ್ನು ರಿಷಿ ಸುನಕ್ ವಿವಾಹವಾದರು. ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.
42 ವರ್ಷ ವಯಸ್ಸಿನ ಸುನಕ್ ಕನ್ಸರ್ವೇಟಿವ್ ಪಕ್ಷದ ಮುಖಂಡರಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ರಾಜನಿಂದ ಸರ್ಕಾರ ರಚಿಸಲು ಆಹ್ವಾನ ಬಂದ ಬಳಿಕ ಅವರು ಬ್ರಿಟನ್ನ ಮುಂದಿನ ಪ್ರಧಾನಿಯಾಗಲಿದ್ದು, ನಂ.10 ನಿವಾಸದಲ್ಲಿ ಪತ್ನಿ ಅಕ್ಷತಾ ಮೂರ್ತಿ ಹಾಗೂ ಇಬ್ಬರು ಮಕ್ಕಳ ಜತೆ ವಾಸಿಸಲಿದ್ದಾರೆ.
ಮಂಗಳವಾರ ಬ್ರಿಟನ್ ರಾಜ, ಬಕಿಂಗ್ಹ್ಯಾಂ ಪ್ಯಾಲೇಸ್ಗೆ ಸುನಾಕ್ ಅವರನ್ನು ಆಹ್ವಾನಿಸುವ ನಿರೀಕ್ಷೆ ಇದೆ.