ಅಕ್ರಮ ಹಣ ವರ್ಗಾವಣೆ ಪ್ರಕರಣ: ಈ.ಡಿ.ಯಿಂದ ಟಿಎಂಸಿ ನಾಯಕನ ಬಂಧನ
ಕೋಲ್ಕತಾ, ನ. 17: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಅಸನ್ಸೋಲ್ ಕಾರಾಗೃಹದಲ್ಲಿ 5 ಗಂಟೆಗೂ ಅಧಿಕ ಕಾಲ ವಿಚಾರಣೆ ನಡೆಸಿದ ಬಳಿಕ ಟಿಎಂಸಿಯ ನಾಯಕ ಅನುಬ್ರತ ಮಂಡಲ್ನನ್ನು ಜಾರಿ ನಿರ್ದೇಶನಾಲಯ ಗುರುವಾರ ಬಂಧಿಸಿದೆ.
ಜಾನುವಾರುಗಳ ಅಕ್ರಮ ಸಾಗಾಟದಿಂದ ಈ ಹಣ ಬಂದಿದೆ ಎಂದು ಶಂಕಿಸಲಾಗಿದೆ. ಈ ಹಿಂದೆ ಜಾನುವಾರು ಅಕ್ರಮ ಸಾಗಾಟಕ್ಕೆ ಸಂಬಂಧಿಸಿ ಮಂಡಲ್ನನ್ನು ಸಿಬಿಐ ಬಂಧಿಸಿತ್ತು. ಮಂಡಲ್ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.
‘‘ಮಂಡಲ್ ಗುರುವಾರ ರಾತ್ರಿ ಜೈಲಿನಲ್ಲಿ ಕಳೆಯಲಿದ್ದಾರೆ. ನಾವು ಶುಕ್ರವಾರ ಅಸನ್ಸೋಲ್ ನ್ಯಾಯಾಲಯದ ಮ್ಯಾಜಿಸ್ಟ್ರೇಟ್ ಮುಂದೆ ಮಂಡಲ್ನನ್ನು ಕಸ್ಟಡಿ ವಿಚಾರಣೆಗೆ ಕೇಳಲಿದ್ದೇವೆ. ಆತನನ್ನು ವಿಚಾರಣೆಗೆ ದಿಲ್ಲಿಗೆ ಕರೆದೊಯ್ಯಲು ಅರ್ಜಿ ಸಲ್ಲಿಸಲಿದ್ದೇವೆ’’ ಎಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಡಲ್ ಅವರನ್ನು ಅವರ ಪುತ್ರಿ ಸುಕನ್ಯಾ ನೀಡಿದ ಹೇಳಿಕೆಯ ಆಧಾರದಲ್ಲಿ ಬಂಧಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.
Next Story