ಗಲ್ವಾನ್ ಕುರಿತ ರಿಚಾ ಛಡ್ಡಾ ಟ್ವೀಟ್ಗೆ ಅಕ್ಷಯ್ ಕುಮಾರ್ ಆಕ್ಷೇಪ: ಪ್ರಕಾಶ್ ರಾಜ್ ಖಂಡನೆ
"ನಿಮಗಿಂತ ಆಕೆ ನಮ್ಮ ದೇಶಕ್ಕೆ ಹೆಚ್ಚು ಪ್ರಸ್ತುತರು" ಎಂದ ಪ್ರಕಾಶ್ ರಾಜ್
ಮುಂಬೈ: "ಗಲ್ವಾನ್ ಸೇಸ್ ಹಾಯ್" ಎಂಬ ನಟಿ ರಿಚಾ ಛಡ್ಡಾ (Richa Chadha) ಅವರ ಟ್ವೀಟ್ ವಿವಾದಕ್ಕೊಳಗಾದ ಬಳಿಕ ನಟ ಅಕ್ಷಯ್ ಕುಮಾರ್ (Akshay Kumar) ನಟಿ ರಿಚಾ ಛಡ್ಡಾ ಟ್ವೀಟ್ ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಕ್ಷಯ್ ಮಾಡಿದ ಟ್ವೀಟ್ ಅನ್ನು ನಟ ಪ್ರಕಾಶ್ ರಾಜ್ )Prakash Raj) ಖಂಡಿಸಿದ್ದಾರಲ್ಲದೆ ರಿಚಾ ಬೆಂಬಲಕ್ಕೆ ನಿಂತಿದ್ದಾರೆ.
"ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ @akshaykumar... ಇಷ್ಟು ಹೇಳಿದ ಮೇಲೆ @ರಿಚಾ ಛಡ್ಡಾ ಅವರು ನಮ್ಮ ದೇಶಕ್ಕೆ ನಿಮಗಿಂದ ಹೆಚ್ಚು ಪ್ರಸ್ತುತರಾಗುತ್ತಾರೆ,'' ಎಂದು ಪ್ರಕಾಶ್ ರಾಜ್ ಬರೆದು "ಹೌದು ನಾವು ನಿಮ್ಮ ಜೊತೆಗಿದ್ದೇವೆ @ರಿಚಾ ಛಡ್ಡಾ... ನಿಮ್ಮ ಮಾತಿನ ಮರ್ಮ ನಮಗೆ ಅರ್ಥವಾಗಿದೆ," ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರುಪಡೆಯಲು ಸರಕಾರದ ಆದೇಶಕ್ಕಾಗಿ ಭಾರತೀಯ ಸೇನೆ ಕಾಯುತ್ತಿದೆ ಎಂದು ನಾರ್ದರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರ ಹೇಳಿಕೆಯನ್ನು ಶೇರ್ ಮಾಡಿದ್ದ ರಿಚಾ ತಮ್ಮ ಟ್ವಿಟರ್ ಹ್ಯಾಂಡಲ್ನಲ್ಲಿ "ಗಲ್ವಾನ್ ಸೇಸ್ ಹಾಯ್" ಎಂದು ಬರೆದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಅಕ್ಷಯ್ ಕುಮಾರ್ "ಇದನ್ನು ನೋಡಿ ನೋವಾಗುತ್ತದೆ. ನಮ್ಮ ಸೇನಾ ಪಡೆಗಳ ಕುರಿತು ನಾವು ಕೃತಘ್ನರಾಗಬಾರದು. ಅವರಲ್ಲಿದ್ದರೆ ನಾವಿದ್ದೇವೆ,'' ಎಂದು ಬರೆದಿದ್ದರು.
ಈ ನಡುವೆ ತಮ್ಮ ಟ್ವೀಟ್ ವಿವಾದಕ್ಕೀಡಾದ ಬೆನ್ನಲ್ಲೇ ರಿಚಾ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮೆಕೋರುವುದಾಗಿ ತಿಳಿಸಿದ್ದರು.
Didn’t expect this from you @akshaykumar ..having said that @RichaChadha is more relevant to our country than you sir. #justasking https://t.co/jAo5Sg6rQF
— Prakash Raj (@prakashraaj) November 25, 2022