ಗುಜರಾತ್: ಸೈಕಲ್ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಮತದಾನ ಮಾಡಲು ಹೊರಟ ಕಾಂಗ್ರೆಸ್ ಶಾಸಕ
ಹೊಸದಿಲ್ಲಿ: ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಗುರುವಾರ ಬೆಳಗ್ಗೆ ಆರಂಭವಾಗಿದ್ದು, ಅಮ್ರೇಲಿಯಲ್ಲಿ ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ವಿಶಿಷ್ಟ ರೀತಿಯಲ್ಲಿ ಮತದಾನ ಮಾಡಲು ತೆರಳಿದರು.
ಪರೇಶ್ ಅವರು ತಮ್ಮ ನಿವಾಸದಿಂದ ಮತದಾನ ಮಾಡಲು ಹೊರಡುವಾಗ ಸೈಕಲ್ ಮೇಲೆ ಗ್ಯಾಸ್ ಸಿಲಿಂಡರ್ ಇಟ್ಟುಕೊಂಡು ಹೊರಟರು. ಈ ಮೂಲಕ ಇಂಧನ ಬೆಲೆ ಏರಿಕೆಯ ವಿಷಯವನ್ನು ಎತ್ತಿ ಹಿಡಿದರು.
ಬಿಜೆಪಿ ಸರಕಾರದ ವೈಫಲ್ಯದಿಂದ ಗುಜರಾತ್ನಲ್ಲಿ ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಅನಿಲ ಮತ್ತು ಇಂಧನ ಬೆಲೆಗಳು ಗಗನಕ್ಕೇರಿವೆ, ಶಿಕ್ಷಣದ ಖಾಸಗೀಕರಣ ನಡೆಯುತ್ತಿದೆ. ಅಧಿಕಾರ ಪರಿವರ್ತನೆ ಆಗುತ್ತದೆ, ಕಾಂಗ್ರೆಸ್ ಬರುತ್ತದೆ ಎಂದು ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಸುದ್ದಿಸಂಸ್ಥೆ ಎಎನ್ ಐಗೆ ತಿಳಿಸಿದ್ದಾರೆ.
#WATCH | Amreli: Congress MLA Paresh Dhanani leaves his residence, to cast his vote, with a gas cylinder on a bicycle underscoring the issue of high fuel prices.#GujaratAssemblyPolls pic.twitter.com/QxfYf1QgQR
— ANI (@ANI) December 1, 2022
#GujaratAssemblyPolls | Amreli: Inflation and joblessness have increased in Gujarat due to the failure of BJP govt. Gas & fuel prices have skyrocketed, privatisation of education has happened. There will be a transition of power and Congres will come: Congress MLA Paresh Dhanani pic.twitter.com/Hv0B9siDVX
— ANI (@ANI) December 1, 2022