ಒಂದೇ ದಿನದಲ್ಲಿ 10 ಲಕ್ಷ ಹೊಸ ಚಂದಾದಾರರನ್ನು ಗಳಿಸಿದ ರವೀಶ್ ಕುಮಾರ್ ಅಧಿಕೃತ ಯೂಟ್ಯೂಬ್ ಚಾನೆಲ್
ಹೊಸದಿಲ್ಲಿ: ರವೀಶ್ ಕುಮಾರ್ NDTV ಗೆ ರಾಜೀನಾಮೆ ನೀಡಿದ ಒಂದು ದಿನದ ಬೆನ್ನಲ್ಲೇ, ಅವರ ಅಧಿಕೃತ ಯೂಟ್ಯೂಬ್ ಚಾನೆಲ್ 10 ಲಕ್ಷಕ್ಕೂ ಅಧಿಕ ಚಂದಾದಾರರನ್ನು ಗಳಿಸಿಕೊಂಡಿದ್ದು, 15 ಲಕ್ಷ ಗಡಿಯನ್ನು ತಲುಪಲು ಕೆಲವೇ ಸಂಖ್ಯೆಗಳು ಬಾಕಿ ಇವೆ.
ರಾಜೀನಾಮೆ ನೀಡಿದ ನಂತರ ತಮ್ಮ ಅಭಿಮಾನಿಗಳು ಮತ್ತು ವೀಕ್ಷಕರೊಂದಿಗೆ ಹಂಚಿಕೊಂಡ ಭಾವನಾತ್ಮಕ ಸಂದೇಶವನ್ನು ಗುರುವಾರ ಬೆಳಿಗ್ಗೆ ರವೀಶ್ ಪೋಸ್ಟ್ ಮಾಡಿದ್ದರು. ರವೀಶ್ ಅವರು ವೀಡಿಯೊ ಪೋಸ್ಟ್ ಮಾಡಿ 18 ಗಂಟೆಗಳು ದಾಟುವ ವೇಳೆಗಾಗಲೇ ಸುಮಾರು 30 ಲಕ್ಷ ವೀಕ್ಷಣೆಯನ್ನು ಪಡೆದುಕೊಂಡಿದೆ.
NDTV ಗೆ ರಾಜೀನಾಮೆ ನೀಡುವ ಮೊದಲು ರವೀಶ್ ಕುಮಾರ್ ಅವರ ಯೂಟ್ಯೂಬ್ ಚಾನೆಲ್ ಕೇವಲ ಅರ್ಧ ಮಿಲಿಯನ್ ಚಂದಾದಾರರನ್ನು ಹೊಂದಿತ್ತು. ಗುರುವಾರ ಸುಮಾರು 1 ಮಿಲಿಯನ್ (10 ಲಕ್ಷ) ಗೂ ಅಧಿಕ ಚಂದಾದಾರರು ಹೊಸದಾಗಿ ಸೇರಿಕೊಂಡಿದ್ದು, ಒಟ್ಟು ಚಂದಾದಾರ ಸಂಖ್ಯೆ 15 ಲಕ್ಷ ತಲುಪಲು ದಾಪುಗಾಲಿಟ್ಟಿದೆ.
ಈ ವರದಿಯನ್ನು ಮಾಡುವ ಸಮಯದಲ್ಲಿ, ಚಾನಲ್ 1.44 ಮಿಲಿಯನ್ ಚಂದಾದಾರರನ್ನು ಹೊಂದಿತ್ತು.
Next Story