ಜೆಎನ್ ಯುನಲ್ಲಿ ಬ್ರಾಹ್ಮಣರ ವಿರುದ್ಧ ಗೋಡೆ ಬರಹ, ತನಿಖೆಗೆ ಆದೇಶ
ಹೊಸದಿಲ್ಲಿ: ದಿಲ್ಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ಕ್ಯಾಂಪಸ್ ನ ಹಲವಾರು ಗೋಡೆಗಳು ಹಾಗೂ ಅಧ್ಯಾಪಕರ ಕೊಠಡಿಗಳಲ್ಲಿ ಗುರುವಾರ ಬ್ರಾಹ್ಮಣ ಸಮುದಾಯದ ವಿರುದ್ಧ ಬರಹಗಳು ಕಂಡುಬಂದಿದ್ದು, ಈ ಬರಹಗಳ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
ಈ ಘಟನೆಯನ್ನು ಖಂಡಿಸಿರುವ ಜೆಎನ್ಯು ಉಪಕುಲಪತಿಗಳು ಘಟನೆಯ ಕುರಿತು ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಚಿತ್ರಗಳಲ್ಲಿ, ಗೋಡೆಗಳು ಹಾಗೂ ಅಧ್ಯಾಪಕರ ಕೊಠಡಿಗಳಲ್ಲಿ "ಬ್ರಾಹ್ಮಣ-ವಿರೋಧಿ" ಘೋಷಣೆಗಳನ್ನು ಬರೆದಿರುವುದನ್ನುತೋರಿಸುತ್ತಿದೆ. "ಶಾಖಾಗೆ ಮರಳಿಹೋಗಿ", "ಬ್ರಾಹ್ಮಣರೇ ಕ್ಯಾಂಪಸ್ ತೊರೆಯಿರಿ" ಎಂಬ ಘೋಷಣೆಗಳನ್ನುಬರೆಯಲಾಗಿದೆ.
ಆರೆಸ್ಸೆಸ್ -ಸಂಯೋಜಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬ್ರಾಹ್ಮಣರ ವಿರುದ್ಧದ ಗೋಡೆಬರಹವನ್ನು ತೀವ್ರವಾಗಿ ಖಂಡಿಸಿದೆ.
Next Story