Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಈ ವರ್ಷ ಭಾರತೀಯ ವಲಸಿಗರಿಂದ ಸ್ವದೇಶಕ್ಕೆ...

ಈ ವರ್ಷ ಭಾರತೀಯ ವಲಸಿಗರಿಂದ ಸ್ವದೇಶಕ್ಕೆ ದಾಖಲೆಯ 100 ಶತಕೋಟಿ ಡಾಲರ್ ರವಾನೆ ನಿರೀಕ್ಷೆ: ವಿಶ್ವಬ್ಯಾಂಕ್ ವರದಿ

ಇದು FDIಗಿಂತ ಶೇ. 25ರಷ್ಟು ಅಧಿಕ

2 Dec 2022 3:52 PM IST
share
ಈ ವರ್ಷ ಭಾರತೀಯ ವಲಸಿಗರಿಂದ ಸ್ವದೇಶಕ್ಕೆ ದಾಖಲೆಯ 100 ಶತಕೋಟಿ ಡಾಲರ್ ರವಾನೆ ನಿರೀಕ್ಷೆ: ವಿಶ್ವಬ್ಯಾಂಕ್ ವರದಿ
ಇದು FDIಗಿಂತ ಶೇ. 25ರಷ್ಟು ಅಧಿಕ

ಹೊಸದಿಲ್ಲಿ: ವಿದೇಶಗಳಲ್ಲಿ ದುಡಿಯುತ್ತಿರುವ ಭಾರತೀಯ ವಲಸಿಗರಿಂದ ಸ್ವದೇಶಕ್ಕೆ ಹಣ ರವಾನೆಯು ಈ ವರ್ಷ ಶೇ.12ರಷ್ಟು ಏರಿಕೆಯಾಗಿ ಮೊದಲ ಬಾರಿಗೆ ದಾಖಲೆಯ 100 ಶತಕೋಟಿ (ಸುಮಾರು 8,12,220 ಕೋ.ರೂ.) ಡಾ.ಗೆ ತಲುಪುವ ನಿರೀಕ್ಷೆಯಿದೆ ಎಂದು ವಿಶ್ವಬ್ಯಾಂಕ್ (World Bank) ವಲಸೆ ಮತ್ತು ಅಭಿವೃದ್ಧಿ ಕುರಿತು ತನ್ನ ವರದಿಯಲ್ಲಿ ಹೇಳಿದೆ. ಇದು ಭಾರತವು ವಲಸಿಗರಿಂದ ಹಣ ಸ್ವೀಕೃತಿಯಲ್ಲಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲು ನೆರವಾಗಲಿದೆ.  ಈ ವಿಷಯದಲ್ಲಿ ಭಾರತವು ಮೆಕ್ಸಿಕೊ, ಚೀನಾ ಮತ್ತು ಫಿಲಿಪ್ಪೀನ್ಸ್ಗಳಿಗಿಂತ ಎಷ್ಟೋ ಮುಂದಿದೆ ಎಂದು timesofindia ವರದಿ ಮಾಡಿದೆ.

ಭಾರತದಿಂದ ವಲಸೆ ಹೋಗುವವರಲ್ಲಿ ಹೆಚ್ಚಿನವರು ಕೊಲ್ಲಿ ರಾಷ್ಟ್ರಗಳಲ್ಲಿ ಕಡಿಮೆ ಕೌಶಲ್ಯ ಅಗತ್ಯವಿರುವ, ಅನೌಪಚಾರಿಕ ಉದ್ಯೋಗಗಳಲ್ಲಿ ದುಡಿಯುತ್ತಿದ್ದು,ಈ ಪ್ರವೃತ್ತಿಯಲ್ಲಿ ಕ್ರಮೇಣ ರಚನಾತ್ಮಕ ಬದಲಾವಣೆಯಾಗಿರುವುದು ಸ್ವದೇಶಕ್ಕೆ ಹಣ ರವಾನೆ ಹೆಚ್ಚಲು ಕಾರಣವಾಗಿದೆ. ಈಗ ಹೆಚ್ಚಿನ ಕೌಶಲ್ಯವನ್ನು ಬೇಡುವ ಅಮೆರಿಕ, ಸಿಂಗಾಪುರ, ಜಪಾನ್, ಆಸ್ಟ್ರೇಲಿಯಾ ಮತ್ತು ನ್ಯೂಝಿಲ್ಯಾಂಡ್ ನಂತಹ ಶ್ರೀಮಂತ ರಾಷ್ಟ್ರಗಳಲ್ಲಿ ಭಾರತೀಯ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ.

ಈ ವರ್ಷ ಭಾರತಕ್ಕೆ ವಿದೇಶಿ ನೇರ ಬಂಡವಾಳ (ಎಫ್ಡಿಐ) ಹರಿವು ಸುಮಾರು 80 ಶತಕೋಟಿ ಡಾಲರ್ ಗಳಾಗಬಹುದು ಎಂದು ಸರಕಾರವು ಅಂದಾಜಿಸಿದೆ. ಇದಕ್ಕೆ ಹೋಲಿಸಿದರೆ ಭಾರತೀಯ ವಲಸಿಗರಿಂದ ಸ್ವದೇಶಕ್ಕೆ 100 ಶತಕೋಟಿ ಡಾಲರ್ ರವಾನೆಯು ಶೇ.25ರಷ್ಟು ಅಧಿಕವಾಗಿರಲಿದೆ.

2016-17 ಮತ್ತು 2020-21ರ ನಡುವೆ ಅಮೆರಿಕಾ, ಬ್ರಿಟನ್ ಹಾಗೂ ಸಿಂಗಾಪುರಗಳಿಂದ ಭಾರತಕ್ಕೆ ರವಾನೆಯಾಗುತ್ತಿರುವ ಹಣದ ಪ್ರಮಾಣವು ಶೇ. 26ರಿಂದ ಶೇ.36ಕ್ಕೆ ಏರಿಕೆಯಾಗಿದ್ದರೆ, ಐದು ಕೊಲ್ಲಿ ರಾಷ್ಟ್ರಗಳಿಂದ (ಸೌದಿ ಅರೇಬಿಯಾ, ಯುಎಇ,ಕುವೈತ್,ಒಮನ್ ಮತ್ತು ಕತರ್) ರವಾನೆಯು ಶೇ.54ರಿಂದ ಶೇ.28ಕ್ಕೆ ಕುಸಿದಿದೆ. ವಲಸಿಗ ಭಾರತೀಯರಿಂದ ಸ್ವದೇಶಕ್ಕೆ ಹಣ ರವಾನೆಯಲ್ಲಿ ಯುಎಇ ಅಗ್ರಸ್ಥಾನದಲ್ಲಿತ್ತಾದರೂ 2020-21ರಲ್ಲಿ ಅದನ್ನು ಹಿಂದಿಕ್ಕಿರುವ ಅಮೆರಿಕಾ ಭಾರತಕ್ಕೆ ಒಟ್ಟು ಹಣ ರವಾನೆಯಲ್ಲಿ ಶೇ.23ರಷ್ಟು ಪಾಲನ್ನು ಹೊಂದಿದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ.  ಅಮೆರಿಕದ ಜನಗಣತಿ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅದು,2019ರಲ್ಲಿ ಅಂದಾಜು ಐದು ದಶಲಕ್ಷ ಭಾರತೀಯರು ಆ ದೇಶದಲ್ಲಿ ವಾಸವಿದ್ದು,ಈ ಪೈಕಿ ಶೇ. 57ರಷ್ಟು ಜನರು ಹತ್ತು ವರ್ಷಗಳಿಗೂ ಅಧಿಕ ಅವಧಿಯಿಂದ ಅಲ್ಲಿ ವಾಸವಾಗಿದ್ದಾರೆ. ಈ ಅವಧಿಯಲ್ಲಿ ಹಲವಾರು  ಭಾರತೀಯ ವಲಸಿಗರು ಪದವಿಗಳನ್ನು ಪೂರೈಸಿದ್ದು,ಇದು ಅವರು ತ್ವರಿತವಾಗಿ ಅತ್ಯಂತ ಹೆಚ್ಚಿನ ಆದಾಯದ ವರ್ಗಕ್ಕೆ ಸೇರಲು ನೆರವಾಗಿದೆ ಎಂದು ಹೇಳಿದೆ.

ವಲಸಿಗ ಭಾರತೀಯರಿಂದ ಹಣ ರವಾನೆಯನ್ನು ವಿದೇಶಿ ವಿನಿಮಯದ ಪ್ರಮುಖ ಮೂಲವನ್ನಾಗಿ ಪರಿಗಣಿಸಲಾಗಿದೆ. ವಿದೇಶದಲ್ಲಿ ನೆಲೆಸಿರುವ ಭಾರತೀಯ ಉದ್ಯೋಗಿಗಳು ತಮ್ಮ ಕುಟುಂಬಗಳಿಗೆ ಕಳುಹಿಸುತ್ತಿರುವ ಹಣವು ಹೆಚ್ಚಿನ ಮಟ್ಟದಲ್ಲಿರುವ ವ್ಯಾಪಾರ ಕೊರತೆಯನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಲು ಸಹ ನೆರವಾಗುತ್ತಿದೆ. ವ್ಯಾಪಾರ ಕೊರತೆಯು ಆಮದುಗಳು ಮತ್ತು ರಫ್ತುಗಳ ನಡುವಿನ ಅಂತರವಾಗಿದೆ. ಈ ವರ್ಷ ಕಚ್ಚಾ ತೈಲಗಳು  ಮತ್ತು ಇತರ ಸರಕುಗಳ ಬೆಲೆಗಳಲ್ಲಿ ತೀವ್ರ ಏರಿಕೆಯಿಂದಾಗಿ ರಫ್ತಿಗಿಂತ ಆಮದು ಪ್ರಮಾಣವು ಅಧಿಕವಾಗಿದೆ. 

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಶ್ರೀಮಂತ ರಾಷ್ಟ್ರಗಳಲ್ಲಿಯ ಭಾರತೀಯ ವಲಸಿಗರು ತಮ್ಮ ಮನೆಗಳಿಂದಲೇ ಕೆಲಸ ನಿರ್ವಹಿಸಿದ್ದರು ಮತ್ತು ಬೃಹತ್ ಆರ್ಥಿಕ ಉತ್ತೇಜನ ಪ್ಯಾಕೇಜ್ ಗಳ ಲಾಭ ಪಡೆದುಕೊಂಡಿದ್ದರು. ಸಾಂಕ್ರಾಮಿಕದ ನಂತರ ವೇತನ ಹೆಚ್ಚಳ ಮತ್ತು ದಾಖಲೆಯ ಉದ್ಯೋಗಾವಕಾಶಗಳ ವಾತಾವರಣಗಳು ಅಧಿಕ ಹಣದುಬ್ಬರದ ನಡುವೆಯೂ ಹಣ ರವಾನೆಯು ವೃದ್ಧಿಸಲು ನೆರವಾಗಿತ್ತು ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ಹೇಳಿದೆ.

ಅಲ್ಲದೆ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ವಲಸಿಗರು,ಮುಖ್ಯವಾಗಿ ಬ್ಲೂ ಕಾಲರ್ ಉದ್ಯೋಗಿಗಳು ಸ್ವದೇಶಕ್ಕೆ ಮರಳಿದ್ದರಿಂದ ಭಾರತಕ್ಕೆ ಹಣ ರವಾನೆಯಲ್ಲಿ ಸುಮಾರು ಮೂರನೇ ಒಂದು ಪಾಲನ್ನು ಹೊಂದಿರುವ ಕೊಲ್ಲಿ ರಾಷ್ಟ್ರಗಳಲ್ಲಿಯ ಆರ್ಥಿಕ ಸ್ಥಿತಿಯು ಭಾರತದ ಪರವಾಗಿ ಪ್ರಮುಖ ಪಾತ್ರವನ್ನು ವಹಿಸಿತ್ತು. 

ಲಸಿಕೆ  ವಿತರಣೆ ಮತ್ತು ವಿಮಾನಯಾನಗಳ ಪುನರಾರಂಭ 2021ಕ್ಕಿಂತ 2022ರಲ್ಲಿ ವಲಸಿಗರು ತಮ್ಮ ಉದ್ಯೋಗಗಳಿಗೆ ಮರಳಿ ಸೇರುವಲ್ಲಿ ಹೆಚ್ಚಿನ ನೆರವು ನೀಡಿತ್ತು. ಕೊಲ್ಲಿರಾಷ್ಟ್ರಗಳ ಬೆಲೆ ಬೆಂಬಲ ನೀತಿಗಳಿಂದಾಗಿ 2022ರಲ್ಲಿ ಹಣದುಬ್ಬರವು ಕಡಿಮೆ ಮಟ್ಟದಲ್ಲಿಯೇ ಇತ್ತು ಮತ್ತು ಅಧಿಕ ಕಚ್ಚಾ ತೈಲ ದರಗಳು ಕಾರ್ಮಿಕರ ಅಗತ್ಯವನ್ನು ಹೆಚ್ಚಿಸಿದ್ದವು. ಇದು ಹಣರವಾನೆಯನ್ನು ಹೆಚ್ಚಿಸಲು ಮತ್ತು ತಮ್ಮ ಕುಟುಂಬಗಳ ನೈಜ ಆದಾಯಗಳ ಮೇಲೆ ದಾಖಲೆಯ ಹಣದುಬ್ಬರದ ಪರಿಣಾಮವನ್ನು ಎದುರಿಸಲು ಭಾರತೀಯ ವಲಸಿಗರಿಗೆ ನೆರವಾಗಿತ್ತು ಎಂದು ವರದಿಯು ತಿಳಿಸಿದೆ. 

ಅಲ್ಲದೆ ಡಾಲರ್ ನೆದುರು ರೂಪಾಯಿಯ ಅಪಮೌಲ್ಯವೂ ಸ್ವದೇಶಕ್ಕೆ ಹೆಚ್ಚಿನ ಹಣ ರವಾನೆಗೆ ನೆರವಾಗಿರಬಹುದು ಎಂದು ವಿಶ್ವಬ್ಯಾಂಕ್ ಹೇಳಿದೆ.

share
Next Story
X