ಮಧ್ಯಪ್ರದೇಶ: ಚಾಲಕನಿಗೆ ಹೃದಯಾಘಾತ, ಹಲವು ವಾಹನಗಳಿಗೆ ಬಸ್ ಢಿಕ್ಕಿ, ಇಬ್ಬರು ಮೃತ್ಯು
ಜಬಲ್ಪುರ (ಮಧ್ಯಪ್ರದೇಶ): ಸಿಟಿ ಬಸ್ನ ಚಾಲಕನೊಬ್ಬ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ ನಂತರ ಬಸ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಜಬಲ್ಪುರದ ಟ್ರಾಫಿಕ್ ಸಿಗ್ನಲ್ನಲ್ಲಿ ನಡೆದಿದ್ದು ನಾಟಕೀಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಚಾಲಕನಿಲ್ಲದೆ ನಿಯಂತ್ರಣ ತಪ್ಪಿದ ಬಸ್, ರಿಕ್ಷಾ ಹಾಗೂ ಬೈಕ್ ಮೇಲೆ ಹರಿದಿದ್ದರಿಂದ ಓರ್ವ ಮೃತಪಟ್ಟಿದ್ದು, ಹಲವರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ ನಿಧಾನವಾಗಿ ಚಲಿಸುತ್ತಿದ್ದ ಕಾರಣ ದೊಡ್ಡ ಅವಘಡ ತಪ್ಪಿತು. ಬಸ್ ಇ-ರಿಕ್ಷಾಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಢಿಕ್ಕಿಯ ರಭಸಕ್ಕೆ ರಿಕ್ಷಾ ಪಲ್ಟಿಯಾಗಿದೆ. ಬಸ್ ಪ್ರಯಾಣಿಕರು ಹಾಗೂ ಇ-ರಿಕ್ಷಾದಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಬಸ್ ಢಿಕ್ಕಿ ಹೊಡೆದು ಗಾಯಗೊಂಡಿದ್ದ ವೃದ್ದರೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಚಾಲಕ ಹರ್ದೇವ್ ಪಾಲ್(60 ವರ್ಷ) ಒಂದು ದಶಕದಿಂದ ಸಿಟಿ ಮೆಟ್ರೋ ಬಸ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಹಠಾತ್ ಹೃದಯ ಸ್ತಂಭನವು ಅವರ ಸಾವಿಗೆ ಕಾರಣವಾಯಿತು ಹಾಗೂ ಚಾಲಕ ಸ್ಟೀರಿಂಗ್ ಮೇಲೆ ಬಿದ್ದ ಕಾರಣ ಈ ದುರಂತ ಸಂಭವಿಸಿದೆ.
MP: Driver dies of heart attack in moving bus, uncontrollable bus tramples 6 on the road, 1 killed
— Siraj Noorani (@sirajnoorani) December 2, 2022
CCTV of city bus accident surfaced in #Jabalpur #MadhyaPradesh #viral2022 #viral #ViralVideos #india #ACCIDENT pic.twitter.com/W4KYXZpuYK