ಗುಜರಾತ್ ಚುನಾವಣೆ: ವಡ್ಗಾಮ್ ಕ್ಷೇತ್ರದಲ್ಲಿ ಎರಡನೇ ಬಾರಿ ವಿಜಯದ ನಗೆ ಬೀರಿದ ಜಿಗ್ನೇಶ್ ಮೇವಾನಿ
ವಡ್ಗಾಮ್: ಜನಪ್ರಿಯ ಹೋರಾಟಗಾರ, ಗುಜರಾತ್ ಕಾಂಗ್ರೆಸ್ನ ಕಾರ್ಯಾಧ್ಯಕ್ಷ ಜಿಗ್ನೇಶ್ ಮೇವಾನಿ ಅವರು ತಮ್ಮ ವಡ್ಗಾಮ್ ಸ್ಥಾನವನ್ನು ಮತ್ತೊಮ್ಮೆ ಗೆದ್ದಿದ್ದಾರೆ. ಕಾಂಗ್ರೆಸ್ ಕಳಪೆ ಪ್ರದರ್ಶನ ನೀಡಿದ್ದರೂ ಮೇವಾನಿ ಮತ್ತೊಮ್ಮೆ ಗೆದ್ದಿರುವುದು ದೇಶಾದ್ಯಂತ ಅವರ ಅಭಿಮಾನಿಗಳಲ್ಲಿ ಹರುಷ ತಂದಿದೆ ಎಂದು ndtv ವರದಿ ಮಾಡಿದೆ
2017 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ, ಮೇವಾನಿ ಅವರು ಸ್ವತಂತ್ರ ಶಾಸಕರಾಗಿ ವಡ್ಗಾಮ್ ಕ್ಷೇತ್ರದಲ್ಲಿ ಗೆದ್ದಿದ್ದರು. ಕ್ಷೇತ್ರದಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಕಾಂಗ್ರೆಸ್ ಅವರಿಗೆ ಬೆಂಬಲ ನೀಡಿತ್ತು.
ಮೇವಾನಿ ದಲಿತ ಹಕ್ಕುಗಳಿಗಾಗಿ ಹೋರಾಡುವ ರಾಷ್ಟ್ರೀಯ ದಲಿತ ಅಧಿಕಾರ್ ಮಂಚ್ನ ಸಂಚಾಲಕರೂ ಆಗಿದ್ದಾರೆ.
Next Story