ಚಿಕ್ಕಮ್ಮನನ್ನು ಕೊಂದು ಮೃತದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಎಸೆದ ವ್ಯಕ್ತಿಯ ಬಂಧನ
ಹೊಸದಿಲ್ಲಿ: ರಾಜಸ್ಥಾನದ ಜೈಪುರದಲ್ಲಿ 32 ವರ್ಷದ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನನ್ನು ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅನುಜ್ ಶರ್ಮಾ ಎಂಬಾತ ದಿಲ್ಲಿಗೆ ಕಾರ್ಯಕ್ರಮಕ್ಕೆ ಹೋಗದಂತೆ ತಡೆದ ನಂತರ ಡಿಸೆಂಬರ್ 11 ರಂದು ಜೈಪುರದ ತನ್ನ ಮನೆಯಲ್ಲಿ 64 ವರ್ಷದ ಚಿಕ್ಕಮ್ಮನನ್ನು ಕೊಂದಿದ್ದಾನೆ ಎಂದು ಅವರು ಹೇಳಿದರು.
ಅನುಜ್ ತನ್ನ ತಂದೆ, ಸಹೋದರಿ ಮತ್ತು ಚಿಕ್ಕಮ್ಮ ಸರೋಜಾ ಅವರೊಂದಿಗೆ ಜೈಪುರದ ವಿದ್ಯಾಧರ್ ನಗರದಲ್ಲಿ ವಾಸಿಸುತ್ತಿದ್ದ. ಸರೋಜಾ ಅವರು ಪತಿಯ ಮರಣದ ನಂತರ ಅನುಜ್ ಕುಟುಂಬದವರೊಂದಿಗೆ ವಾಸಿಸುತ್ತಿದ್ದರು. ಅನುಜ್ ತಾಯಿ ಕಳೆದ ವರ್ಷ COVID-19 ನಿಂದ ಸಾವನ್ನಪ್ಪಿದ್ದರು.
ಡಿಸೆಂಬರ್ 11 ರಂದು ಅನುಜ್ ತಂದೆ ಮತ್ತು ಸಹೋದರಿ ಇಂದೋರ್ಗೆ ಹೋಗಿದ್ದರಿಂದ ಅನುಜ್ ಹಾಗೂ ಚಿಕ್ಕಮ್ಮ ಇಬ್ಬರೇ ಮೆನಯಲ್ಲಿದ್ದರು. ಅನುಜ್ ದಿಲ್ಲಿಗೆ ಹೋಗಲು ಬಯಸಿದ್ದ, ಆದರೆ ಸರೋಜ ಆತನನ್ನು ತಡೆದರು. ಇದು ವಾಗ್ವಾದಕ್ಕೆ ಕಾರಣವಾಯಿತು. ಕೋಪದ ಭರದಲ್ಲಿ ಚಿಕ್ಕಮ್ಮ ಚಹಾ ಮಾಡುತ್ತಿದ್ದಾಗ ಆಕೆಯ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಮಾರ್ಬಲ್ ಕಟ್ಟರ್ ನಿಂದ ಚಿಕ್ಕಮ್ಮನ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಜೈಪುರ-ಸಿಕರ್ ಹೈವಾದಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ. ಅನುಜ್ ಚಿಕ್ಕಮ್ಮನ ದೇಹಗಳನ್ನು ತುಂಡು ಮಾಡಿ ಬಕೆಟ್ ಹಾಗೂ ಸೂಟ್ ಕೇಸ್ ಗಳಲ್ಲಿ ಸಾಗಿಸಿದ್ದ. ನಂತರ ನಾಪತ್ತೆ ದೂರನ್ನ ದಾಖಲಿಸಿದ್ದ. ಪೊಲೀಸರ ದಾರಿ ತಪ್ಪಿಸಲು ತನ್ನ ಸ್ನೇಹಿತರೊಂದಿಗೆ ಜೊತೆಗೂಡಿ ಚಿಕ್ಕಮ್ಮನನ್ನು ಹುಡುಕುವ ನಾಟಕವಾಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Police get remand of Jaipur man who killed aunt, chopped body into pieces, 8 body parts recovered
— ANI Digital (@ani_digital) December 18, 2022
Read @ANI Story | https://t.co/NZSlhepowN
#Jaipur #Murder pic.twitter.com/Dx8fDdrREJ