ಫಿಫಾ ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ದೀಪಿಕಾ ಪಡುಕೋಣೆ: ಬಲಪಂಥೀಯರ ಕಾಲೆಳೆದ ನೆಟ್ಟಿಗರು
-

Photo: eshajayasrii/Twitter
ಹೊಸದಿಲ್ಲಿ/ದೋಹಾ: ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ. ಕತರ್‌ನ ದೋಹಾದ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವಿನ ಫೈನಲ್‌ಗೆ ಮುನ್ನ ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸಿದ್ದು, ದೀಪಿಕಾರೊಂದಿಗೆ ಸ್ಪೇನ್‌ನ ಮಾಜಿ ಗೋಲ್‌ಕೀಪರ್ ಮತ್ತು ನಾಯಕ ಇಕರ್ ಕ್ಯಾಸಿಲಾಸ್ ಇದ್ದರು.
ಮೇ, 2022 ರಲ್ಲಿ ಐಷಾರಾಮಿ ಬ್ರಾಂಡ್ ಲೂಯಿ ವಿಟಾನ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ದೀಪಿಕಾ, ಫೈನಲ್‌ನ ವಿಜೇತರಿಗೆ ನೀಡಲಾಗುವ ಟ್ರೋಫಿಯನ್ನು ಅನಾವರಣಗೊಳಿಸಿದ್ದಾರೆ.
ಬಲಪಂಥೀಯರಿಗೆ ಮುಖಭಂಗ ಎಂದ ನೆಟ್ಟಿಗರು
ದೀಪಿಕಾ ಪಡುಕೋಣೆ ವಿಶ್ವದ ಅತ್ಯಂತ ದುಬಾರಿ ಪಂದ್ಯಾಕೂಟದ ಫೈನಲ್ ಟ್ರೋಫಿಯನ್ನು ಅನಾವರಣಗೊಳಿಸುತ್ತಿದ್ದಂತೆ, ಭಾರತೀಯ ಅಭಿಮಾನಿಗಳು ಬಲಪಂಥೀಯರ ಕಾಲೆಳಿದಿದ್ದಾರೆ. ಇತ್ತೀಚೆಗೆ ಬಿಡುಗಡೆಗೊಂಡಿದ್ದ ʼಪಠಾಣ್ʼ ಚಿತ್ರದ ಬೇಷರಂ ಹಾಡಿನ ಕುರಿತಂತೆ ಬಲಪಂಥೀಯರು ಮಾಡಿರುವ ವಿವಾದದ ಹಿನ್ನೆಲೆಯಲ್ಲಿ ದೀಪಿಕಾ ಅವರು ಫಿಫಾ ಟ್ರೋಫಿಯನ್ನು ಅನಾವರಣಗೊಳಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿಎಎ ಪ್ರತಿಭಟನೆ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದ ದೀಪಿಕಾ ಅವರನ್ನು ಬಲಪಂಥೀಯ ಹಿಂದುತ್ವವಾದಿ ಟ್ರೋಲ್ ಪಡೆಯು ಒಂದಿಲ್ಲೊಂದು ವಿಷಯಕ್ಕೆ ಮುಗಿ ಬೀಳುತ್ತಿದ್ದು, ಪಠಾಣ್ ಚಿತ್ರದ ಬಹಿಷ್ಕಾರದ ಬೆದರಿಕೆಯನ್ನೂ ಹಾಕುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ನೆಟ್ಟಿಗರು ಹಾಗೂ ದೀಪಿಕಾ ಅಭಿಮಾನಿಗಳು, ʼನೀವು ಆಕೆಯನ್ನು ಬಹಿಷ್ಕರಿಸಿ, ಅವರು ಉನ್ನತ ಸ್ಥಾನಕ್ಕೆ ತಲುಪುತ್ತಲೇ ಇದ್ದಾರೆʼ ಎಂದು ಬಲಪಂಥೀಯರ ಕಾಲೆಳೆದಿದ್ದಾರೆ.
“ನೀವು ಅವರನ್ನು ಬಹಿಷ್ಕರಿಸಲು ಬಯಸುವಿರಾ? ಇದು ಎಂದಿಗೂ ಆಗುವುದಿಲ್ಲ. ಲೂಯಿ ವಿಟಾನ್ ನ ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ ಪ್ರತಿನಿಧಿಸುವ ದೀಪಿಕಾ ಪಡುಕೋಣೆ ಫಿಫಾ ಟ್ರೋಫಿಯನ್ನು ಅನಾವರಣಗೊಳಿಸುವ ಗೌರವವನ್ನು ಪಡೆದ ಮೊದಲ ಭಾರತೀಯರಾಗಿದ್ದಾರೆ. ನಿಮ್ಮ ಬಯಕೆಗಳು ಎಂದಿಗೂ ನೆರವೇರುವುದಿಲ್ಲ!” ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
“ದೀಪಿಕಾ ಪಡುಕೋಣೆ ಫಿಫಾ ವಿಶ್ವಕಪ್ ಟ್ರೋಫಿಯನ್ನು ಅನಾವರಣಗೊಳಿಸುವ ಮೂಲಕ ಭಾರತವನ್ನು ಹೆಮ್ಮೆಪಡುವಂತೆ ಮಾಡಿದ್ದರಿಂದ ಅಂಧಭಕ್ತರಿಗೆ ಇದು ಕಠಿಣ ದಿನ!” ಎಂದು ಡಾ. ರಾಕೇಶ್ ಕೆ ರಾಥೋರ್ ಎಂಬವರು ಟ್ವೀಟ್ ಮಾಡಿದ್ದಾರೆ.
You want to boycott her?
— (@eshajayasrii) December 18, 2022
It will never happen
Deepika Padukone is the first Indian to get the honor of unveiling the FIFA trophy representing LV as their first Indian global brand ambassador. Your favs could never! #DeepikaPadukone #FIFAWorldCup pic.twitter.com/4BVtCkvSYm
Tough day for AndhBhakts as @deepikapadukone makes India Proud by revealing the #FIFAWorldCup Trophy ! Mostly in Dilemma to Celebrate or to Boycott ! #Pathan
— Dr Rakesh K. Rathore (@IndianGoonda) December 18, 2022
Why Deepika Padukone with the trophy ?? Bhakt nightmare came true
— schadenfreude fc (@_tanmay_) December 18, 2022
Deepika Padukone unveiling the FIFA World Cup Trophy in Qatar.
— Jazel Danish JP (@jazeldanish) December 18, 2022
Sanghi boycott here Welcome there#RSS #BJP #bjpmaharashtra #Pathan#deepikapadukonehot #FIFAWorldCup pic.twitter.com/EiOdUYWmIu
@deepikapadukone presents the World Cup Trophy before the start of the #FIFAWorldCup
— V PavanKumar (@VPavanKumar28) December 18, 2022
(Note : Boycott gang should avoid this!) pic.twitter.com/voHth1OjEz
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.