ಕಣಿವೆಗೆ ಉರುಳಿದ ಸೇನಾ ವಾಹನ: 3 ಅಧಿಕಾರಿಗಳು ಸೇರಿದಂತೆ 16 ಸೈನಿಕರು ಮೃತ್ಯು
ಹೊಸದಿಲ್ಲಿ: ಸೇನಾ ಟ್ರಕ್ ಒಂದು ಸಿಕ್ಕಿಂನಲ್ಲಿ ಇಂದು ಕಣಿವೆಗೆ ಉರುಳಿದ ಪರಿಣಾಮ ಅದರಲ್ಲಿದ್ದ ಮೂವರು ಸೇನಾಧಿಕಾರಿಗಳೂ ಸೇರಿದಂತೆ ಒಟ್ಟು 16 ಸೈನಿಕರು ಮೃಪಟ್ಟಿದ್ದಾರೆ.
ಸಿಕ್ಕಿಂನ ಛಟ್ಟೆನ್ ಪ್ರದೇಶದಿಂದ ಇಂದು ಬೆಳಿಗ್ಗೆ ಥಂಗು ಎಂಬಲ್ಲಿಗೆ ಸಾಗುತ್ತಿದ್ದ ಮೂರು ಸೇನಾ ಟ್ರಕ್ಗಳ ಪೈಕಿ ಈ ಅವಘಡಕ್ಕೀಡಾದ ಟ್ರಕ್ ಸೇರಿದೆ,
ಝೆಮಾ ಕಡೆಗೆ ಸಾಗುತ್ತಿದ್ದ ವಾಹನ ಇಳಿಜಾರು ರಸ್ತೆಯೊಂದರಲ್ಲಿ ತಿರುವಿನಲ್ಲಿ ಸಾಗುತ್ತಿದ್ದಾಗ ಸ್ಕಿಡ್ ಆದ ಪರಿಣಾಮ ವಾಹನ ಕಣಿವೆಗೆ ಉರುಳಿ ಬಿದ್ದಿದೆ. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದ್ದು ನಾಲ್ಕು ಮಂದಿ ಗಾಯಾಳು ಸೈನಿಕರನ್ನು ವಿಮಾನ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದ ಕುರಿತು ಟ್ವೀಟ್ ಮಾಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೃತ ಸೇನಾ ಸಿಬ್ಬಂದಿಯ ಕುಟುಂಬಗಳಿಗೆ ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ ಹಾಗೂ ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
Next Story