Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿರುದ್ಯೋಗ ಹೆಚ್ಚಿರುವುದನ್ನು CMIE...

ನಿರುದ್ಯೋಗ ಹೆಚ್ಚಿರುವುದನ್ನು CMIE ತೋರಿಸಿದ ಬಳಿಕ ಖಾಸಗಿ ಸಂಸ್ಥೆಗಳ ಸಮೀಕ್ಷೆ ವಿರುದ್ಧ ಕೇಂದ್ರದ ಎಚ್ಚರಿಕೆ: ವರದಿ

5 Jan 2023 4:08 PM IST
share
ನಿರುದ್ಯೋಗ ಹೆಚ್ಚಿರುವುದನ್ನು CMIE ತೋರಿಸಿದ ಬಳಿಕ ಖಾಸಗಿ ಸಂಸ್ಥೆಗಳ ಸಮೀಕ್ಷೆ ವಿರುದ್ಧ ಕೇಂದ್ರದ ಎಚ್ಚರಿಕೆ: ವರದಿ

ಹೊಸದಿಲ್ಲಿ: ಕೇಂದ್ರ ಕಾರ್ಮಿಕ ಸಚಿವಾಲಯವು ಖಾಸಗಿ ಸಂಸ್ಥೆಗಳಿಂದ ನಿರುದ್ಯೋಗ ಸಮೀಕ್ಷೆಗಳ ವಿರುದ್ಧ ಬುಧವಾರ ಎಚ್ಚರಿಕೆ ನೀಡಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (CMIE)ಯು ರವಿವಾರ ಬಿಡುಗಡೆಗೊಳಿಸಿದ್ದ ದತ್ತಾಂಶಗಳು ಭಾರತದಲ್ಲಿ ನಿರುದ್ಯೋಗ ದರವು ಡಿಸೆಂಬರ್ ನಲ್ಲಿ ಕಳೆದ 16 ತಿಂಗಳುಗಳಲ್ಲಿ ಗರಿಷ್ಠವಾದ ಶೇ.8.3ಕ್ಕೆ ಏರಿಕೆಯಾಗಿದೆ ಎನ್ನುವುದನ್ನು ತೋರಿಸಿತ್ತು. ಇದರ ಬೆನ್ನಿಗೇ ಕಾರ್ಮಿಕ ಸಚಿವಾಲಯವು ‘ನಿರುದ್ಯೋಗ ದರ ಕುರಿತು ಸುದ್ದಿಯ ನಿರಾಕರಣೆ’ ಶೀರ್ಷಿಕೆಯಡಿ ಪತ್ರಿಕಾ ಹೇಳಿಕೆಯನ್ನು ಹೊರಡಿಸಿದೆ ಎಂದು scroll.in ವರದಿ ಮಾಡಿದೆ.

ಹಲವಾರು ಖಾಸಗಿ ಸಂಸ್ಥೆಗಳು ತಮ್ಮ ಕಾರ್ಯವಿಧಾನಗಳನ್ನು ಆಧರಿಸಿ ಇಂತಹ ಸಮೀಕ್ಷೆಗಳನ್ನು ನಡೆಸುತ್ತಿವೆ,ಇಂತಹ ಸಮೀಕ್ಷೆಗಳು ಸಾಮಾನ್ಯವಾಗಿ ವೈಜ್ಞಾನಿಕವಾಗಿರುವುದಿಲ್ಲ ಮತ್ತು ಅಂತರರಾಷ್ಟ್ರೀಯವಾಗಿ ಅಂಗೀಕರಿಸಲ್ಪಟ್ಟ ಮಾನದಂಡಗಳನ್ನು ಆಧರಿಸಿರುವುದಿಲ್ಲ ಎಂದು ಸರಕಾರವು ಹೇಳಿದೆ.

ಸಿಎಂಐಇ ದತ್ತಾಂಶಗಳಂತೆ ನವಂಬರ್ ನಲ್ಲಿ ದೇಶದಲ್ಲಿ ನಿರುದ್ಯೋಗ ದರವು ಶೇ.8ರಷ್ಟಿತ್ತು. ನಿರುದ್ಯೋಗ ಕುರಿತು ಅಧಿಕೃತ ಮಾಸಿಕ ಅಂಕಿಅಂಶಗಳ ಕೊರತೆಯಿಂದಾಗಿ ಆರ್ಥಿಕ ತಜ್ಞರು ಮತ್ತು ನೀತಿ ಸಂಶೋಧಕರು ಈ ದತ್ತಾಂಶಗಳನ್ನು ನೆಚ್ಚಿಕೊಳ್ಳುತ್ತಾರೆ.

ನರೇಂದ್ರ ಮೋದಿ ಸರಕಾರವು ಮಾರ್ಚ್ 2018ರ ಬಳಿಕ ಲೇಬರ್ ಬ್ಯೂರೋದಿಂದ ತ್ರೈಮಾಸಿಕ ಉದ್ಯಮಗಳ ಸಮೀಕ್ಷೆಗಳನ್ನು ಸ್ಥಗಿತಗೊಳಿಸಿತ್ತು. ವಾರ್ಷಿಕ ಉದ್ಯೋಗ-ನಿರುದ್ಯೋಗ ಸಮೀಕ್ಷೆಗಳನ್ನೂ 2017ರಲ್ಲಿ ರದ್ದುಗೊಳಿಸಲಾಗಿತ್ತು.

ಖಾಸಗಿ ಕಂಪನಿಯೊಂದು ನಡೆಸಿದ್ದ ಸಮೀಕ್ಷೆಯನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ಸಿಎಂಐಇಯ ನಿರುದ್ಯೋಗ ದರದ ಅಂದಾಜನ್ನು ನೇರವಾಗಿ ಪ್ರಸ್ತಾಪಿಸದೆ ಕೇಂದ್ರದ ಪತ್ರಿಕಾ ಟಿಪ್ಪಣಿಯು ಹೇಳಿದೆ.

ಈ ಕಂಪನಿಗಳು/ಸಂಸ್ಥೆಗಳು ಬಳಸುವ ಕಾರ್ಯವಿಧಾನಗಳು ತಮ್ಮದೇ ಆದ ಸ್ಯಾಂಪಲಿಂಗ್ ಪದ್ಧತಿ ಮತ್ತು ಉದ್ಯೋಗ/ನಿರುದ್ಯೋಗ ಕುರಿತು ಅಂಕಿಅಂಶ ಸಂಗ್ರಹಕ್ಕೆ ಬಳಸುವ ವ್ಯಾಖ್ಯೆಗಳಿಂದಾಗಿ ನಿರುದ್ಯೋಗವನ್ನು ಅತಿಯಾಗಿ ವರದಿ ಮಾಡುವ ಅಥವಾ ಉದ್ಯೋಗವನ್ನು ಕಡಿಮೆಯಾಗಿ ವರದಿ ಮಾಡುವ ಪಕ್ಷಪಾತ ಪ್ರವೃತ್ತಿಯನ್ನು ಹೊಂದಿವೆ. ಇಂತಹ ಸಮೀಕ್ಷೆಗಳ ಫಲಿತಾಂಶಗಳನ್ನು ಎಚ್ಚರಿಕೆಯಿಂದ ಬಳಸಬೇಕು ಎಂದು ಕಾರ್ಮಿಕ ಸಚಿವಾಲಯವು ಹೇಳಿದೆ.

ಸಿಎಂಐಇ ಭಾರತದಲ್ಲಿ ನಿರುದ್ಯೋಗ ದರವನ್ನು 1.78 ಲ.ಕ್ಕೂ ಅಧಿಕ ಕುಟುಂಬಗಳ ಸ್ಯಾಂಪಲ್ ಗಾತ್ರವನ್ನು ಆಧರಿಸಿ ಲೆಕ್ಕ ಹಾಕುತ್ತದೆ. ನವಂಬರ್ನಲ್ಲಿ ಶೇ.8.96 ರಷ್ಟಿದ್ದ ನಗರ ಪ್ರದೇಶಗಳಲ್ಲಿ ನಿರುದ್ಯೋಗ ದರವು ಡಿಸೆಂಬರ್ನಲ್ಲಿ ಶೇ.10.09ಕ್ಕೆ ಏರಿದೆ ಎಂದು ಅದು ತನ್ನ ಇತ್ತೀಚಿನ ದತ್ತಾಂಶಗಳಲ್ಲಿ ಬೆಟ್ಟು ಮಾಡಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ದರವು ನವಂಬರ್ನಲ್ಲಿದ್ದ ಶೇ.7.55ರಿಂದ ಡಿಸೆಂಬರ್ನಲ್ಲಿ ಶೇ.7.44ಕ್ಕೆ ತಗ್ಗಿದೆ.

ಈ ನಡುವೆ ಕಾರ್ಮಿಕ ಸಚಿವಾಲಯವು,ತ್ರೈಮಾಸಿಕ ನಿಯತಕಾಲಿಕ ಕಾರ್ಮಿಕ ಬಲ ಸಮೀಕ್ಷೆ (ಪಿಎಲ್ಎಫ್ಎಸ್)ಯ ಆಧಾರದಲ್ಲಿ ಅಂಕಿಅಂಶ ಮತ್ತು ಕಾರ್ಯಕ್ರಮ ಜಾರಿ ಸಚಿವಾಲಯವು ಉದ್ಯೋಗ ಮತ್ತು ನಿರುದ್ಯೋಗ ಕುರಿತು ಅಧಿಕೃತ ದತ್ತಾಂಶಗಳನ್ನು ಬಿಡುಗಡೆಗೊಳಿಸುತ್ತದೆ. ಲಭ್ಯವಿರುವ ಪಿಎಲ್ಎಫ್ಎಸ್ ವರದಿಯಂತೆ ಕಾರ್ಮಿಕ ಜನಸಂಖ್ಯೆ ಅನುಪಾತ (15 ವರ್ಷ ಪ್ರಾಯದ ಮತ್ತು ಮೇಲ್ಪಟ್ಟವರಿಗೆ ಉದ್ಯೋಗ)ವು 2022 ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿ ಶೇ.44.5ರಷ್ಟಿತ್ತು. 2019ರ ಇದೇ ಅವಧಿಯಲ್ಲಿ ಅದು ಶೇ.43.4ರಷ್ಟಿತ್ತು. 2019ರ ಜುಲೈ-ಸೆಪ್ಟಂಬರ್ ತ್ರೈಮಾಸಿಕದಲ್ಲಿದ್ದ ಶೇ.8.3ಕ್ಕೆ ಹೋಲಿಸಿದರೆ 2022ರ ಇದೇ ಅವಧಿಯಲ್ಲಿ ಶೇ.7.2ರಷ್ಟಿತ್ತು ಎಂದು ತಿಳಿಸಿದೆ.

ಈ ದತ್ತಾಂಶಗಳನ್ನು ಉಲ್ಲೇಖಿಸಿ ಸಚಿವಾಲಯವು,ಉದ್ಯೋಗ ಮಾರುಕಟ್ಟೆಯು ಕೋವಿಡ್ ಬಿಕ್ಕಟ್ಟಿನ ಆಘಾತದಿಂದ ಚೇತರಿಸಿಕೊಂಡಿರುವುದು ಮಾತ್ರವಲ್ಲ,ಅದು ಸಾಂಕ್ರಾಮಿಕದ ಪೂರ್ವದ ಅವಧಿಗಿಂತ ಹೆಚ್ಚಿನ ಮಟ್ಟದಲ್ಲಿದೆ ಎಂದು ಹೇಳಿದೆ.

ಇದನ್ನೂ ಓದಿ: ನಿರುದ್ಯೋಗದ ಕಾರಣಕ್ಕೆ ಯುವಕರಿಗೆ ವಧು ದೊರೆಯುತ್ತಿಲ್ಲ: ಶರದ್ ಪವಾರ್

share
Next Story
X