ಮತ್ತೊಂದು ಮೂತ್ರ ವಿಸರ್ಜನೆ ಪ್ರಕರಣ: ಈ ಬಾರಿ ವಿಮಾನ ನಿಲ್ದಾಣದ ಗೇಟ್ನಲ್ಲಿ...
ಹೊಸದಿಲ್ಲಿ: ಇಲ್ಲಿನ ಐಜಿಐ ವಿಮಾನ ನಿಲ್ದಾಣದ ಟರ್ಮಿನಲ್-3ರ ನಿರ್ಗಮನ ಪ್ರದೇಶದ ಗೇಟ್ನಲ್ಲಿ ಮೂತ್ರ ವಿಸರ್ಜನೆ ಮಾಡಿದ ಆರೋಪದಲ್ಲಿ 39 ವರ್ಷದ ಪಾನಮತ್ತ ವ್ಯಕ್ತಿಯನ್ನು ಬಂಧಿಸಲಾಗಿದೆ.
ರವಿವಾರ ಸಂಜೆ ಈ ಘಟನೆ ನಡೆದಿದ್ದು, ಬಿಹಾರದ ಜೌಹಾರ್ ಅಲಿ ಖಾನ್ ಬಂಧಿತ ವ್ಯಕ್ತಿ ಎಂದು ಪೊಲೀಸರು ಹೇಳಿದ್ದಾರೆ. ಅದೇ ದಿನ ಜಾಮೀನು ಬಾಂಡ್ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.
ವ್ಯಕ್ತಿಯೊಬ್ಬ ನಿರ್ಗಮನ ಪ್ರದೇಶದ ಗೇಟ್-6ರ ಬಳಿ ಸಾರ್ವಜನಿಕವಾಗಿ ಮೂತ್ರ ಮಾಡುತ್ತಿದ್ದಾನೆ ಎಂಬ ಮಾಹಿತಿ ಬಂತು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಖಾನ್ ಮದ್ಯಪಾನ ಮಾಡಿ ಸಾರ್ವಜನಿಕ ಪ್ರದೇಶದಲ್ಲಿ ಚೀರಾಡುತ್ತಾ, ಇತರರನ್ನು ನಿಂದಿಸುತ್ತಾ ಕಿರಿ ಕಿರಿ ಉಂಟು ಮಾಡುತ್ತಿದ್ದ ಎಂದು ವಿವರಿಸಿದ್ದಾರೆ.
ಸೌದಿ ಅರೇಬಿಯಾದ ದಮಾಮ್ಗೆ ಈತ ಪ್ರಯಾಣ ಮಾಡಬೇಕಿತ್ತು, ಸಪ್ಧರ್ಜಂಗ್ ಆಸ್ಪತ್ರೆಯಲ್ಲಿ ಆತನನ್ನು ಪರೀಕ್ಷಿಸಿಗ ಮದ್ಯಪಾನ ಮಾಡಿದ್ದು ದೃಢಪಟ್ಟಿದೆ. ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: RRR ಸಿನಿಮಾ ಪ್ರದರ್ಶಿಸುವ ಚಿತ್ರಮಂದಿರಗಳಿಗೆ ಬೆಂಕಿ ಹಚ್ಚುತ್ತೇನೆಂದಿದ್ದ BJP ಸಂಸದನಿಂದಲೇ ಚಿತ್ರ ತಂಡಕ್ಕೆ ಅಭಿನಂದನೆ