ರವೀಶ್ ಕುಮಾರ್ ಯೂಟ್ಯೂಬ್ ಚಾನಲ್ ಗೆ 40 ಲಕ್ಷ+ ಸಬ್ಸ್ಕ್ರೈಬರ್ಗಳು !
ಗೋದಿ ಮೀಡಿಯಾದ ಗೋದಿ ಸೇಟ್ ಗಳೂ ಸಬ್ಸ್ಕ್ರೈಬ್ ಮಾಡಿ ಎಂದ ಖ್ಯಾತ ಪತ್ರಕರ್ತ
ಹೊಸದಿಲ್ಲಿ: ಎನ್ಡಿಟಿವಿ ಸಮೂಹವನ್ನು ಅದಾನಿ ಸಂಸ್ಥೆಯು ಕೈವಶಪಡಿಸಿಕೊಂಡ ಬಳಿಕ ಹಿರಿಯ ಕಾರ್ಯನಿರ್ವಾಹಕ ಪತ್ರಕರ್ತರಾಗಿದ್ದ ರವೀಶ್ ಕುಮಾರ್ ಕುಮಾರ್ ಸೇರಿದಂತೆ ಹಲವರು ಸಂಸ್ಥೆಯನ್ನು ತ್ಯಜಿಸಿದ್ದರು. ಬಳಿಕ ರವೀಶ್ ಕುಮಾರ್ ಸ್ವತಃ ಯೂಟ್ಯೂಬ್ ಚಾನೆಲ್ ಒಂದನ್ನು ಪ್ರಾರಂಭಿಸಿದ್ದರು. ಇದೀಗ ಅವರು ಚಾನೆಲ್ ಪ್ರಾರಂಭಿಸಿ ಕೆಲ ದಿನಗಳಾಗುವಷ್ಟರಲ್ಲೇ ನಲ್ವತ್ತು ಲಕ್ಷಕ್ಕೂ ಹೆಚ್ಚು ಸಬ್ಸ್ಕ್ರೈಬರ್ ಗಳನ್ನು ಗಳಿಸಿದೆ. ಈ ಕುರಿತು ರವೀಶ್ ಕುಮಾರ್ ಫೇಸ್ಬುಕ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.
ತಮ್ಮ ಫೇಸ್ಬುಕ್ ಖಾತೆಯಲ್ಲಿ ಅವರು, "ಧೈರ್ಯ ಹೆಚ್ಚಾಗಿರಬೇಕೆ ಹೊರತು ಹಣವಲ್ಲ. ಇಷ್ಟು ಸಣ್ಣ ಅವಧಿಯಲ್ಲಿ ನೀವು ನೀಡಿರುವ ಬೆಂಬಲಕ್ಕೆ ಕೃತಜ್ಞತೆಗಳು. ನಮ್ಮ ಯೂಟ್ಯೂಬ್ ಚಾನೆಲ್ ʼರವೀಶ್ ಕುಮಾರ್ʼ ಅಧಿಕೃತ ಚಂದಾದಾರರ ಸಂಖ್ಯೆ 40 ಲಕ್ಷ ತಲುಪಿದೆ. ಇದು ನಿಮ್ಮ ಗೆಲುವು. ನಿಮಗೆ ಅಭಿನಂದನೆಗಳು. ಗೋದಿ ಮಾಧ್ಯಮದ ಗೋದಿ ಸೆಟ್ಗಳು ಸಹ ನಮ್ಮ ಚಾನೆಲ್ ನ ಚಂದಾದಾರರಾಗಲು ವಿನಂತಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ.
"ಗೋದಿ ಮೀಡಿಯಾದ ಗೋದಿ ಸೇಟುಗಳ ಅವಸ್ಥೆಯೂ ಚಿಂತಾಜನಕವಾಗಿದೆ. ಅವರು ಕೂಡಾ ತಮ್ಮ ಇಮೇಜ್ ಉಳಿಸಿಕೊಳ್ಳಲು ಚಾನೆಲ್ ನಿಂದ ಚಾನೆಲ್ ಗೆ ಅಲೆದಾಡುತ್ತಿದ್ದಾರೆ" ಎಂದು ವ್ಯಕ್ತಿಯೋರ್ವರು ಈ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದಾರೆ.