ಸಾಮಾಜಿಕ ಮಾಧ್ಯಮದಲ್ಲಿ ಸಹನಟಿಯ ವಿಡಿಯೋ, ಫೊಟೋ ಹಂಚಿದ ಆರೋಪ: ರಾಖಿ ಸಾವಂತ್ ಪೊಲೀಸ್ ವಶಕ್ಕೆ
ಮುಂಬೈ: ನಟಿ ಶೆರ್ಲಿನ್ ಚೋಪ್ರಾ ನೀಡಿದ್ದ ದೂರಿನ ಅನ್ವಯ ರಾಖಿ ಸಾವಂತ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ನಟಿ ಶರ್ಲಿನ್ ಛೋಪ್ರಾ ಅವರ ಖಾಸಗಿ ವಿಡಿಯೋ ಲಿಂಕ್ಗಳು ಮತ್ತು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ ಆರೋಪ ರಾಖಿ ಸಾವಂತ್ (Rakhi Sawant) ಮೇಲಿದೆ.
ನಟಿ ದೂರಿನ ನಂತರ, ಮುಂಬೈನ ಅಂಬೋಲಿ ಪೊಲೀಸರು ಸಾವಂತ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 ಎ, 509 , 504 ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದರು.
ಅಂಬೋಲಿ ಪೊಲೀಸ್ ತಂಡವು ಗುರುವಾರ ಸಾವಂತ್ ಅವರನ್ನು ಬಂಧಿಸಿ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆತಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಟಿ ಶೆರ್ಲಿನ್ ಚೋಪ್ರಾ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, “ರಾಖಿ ಸಾವಂತ್ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ನಿನ್ನೆ ವಜಾ ಮಾಡಿದೆ. ಪೊಲೀಸರು ರಾಖಿಯನ್ನು ಬಂಧಿಸಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸಾವಂತ್ ಮತ್ತು ಚೋಪ್ರಾ ನಡುವೆ ಕೆಲವು ದಿನಗಳಿಂದ ಜಗಳ ನಡೆಯುತ್ತಿದೆ. ಕಳೆದ ವರ್ಷ ನವೆಂಬರ್ನಲ್ಲಿ, ಅವರು ಆಕ್ಷೇಪಾರ್ಹ ಭಾಷೆಯನ್ನು ಬಳಸಿದ್ದಕ್ಕಾಗಿ ಪರಸ್ಪರರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ದರೋಡೆ ತಪ್ಪಿಸಿದ ಇಬ್ಬರು ಮಹಿಳಾ ಪೊಲೀಸರು; ವಿಡಿಯೋ ವೈರಲ್
BREAKING NEWS!!!
— Sherlyn Chopra (शर्लिन चोपड़ा) (@SherlynChopra) January 19, 2023
AMBOLI POLICE HAS ARRESTED RAKHI SAWANT IN RESPECT WITH FIR 883/2022
YESTERDAY, RAKHI SAWANT’S ABA 1870/2022 WAS REJECTED BY MUMBAI SESSIONS COURT