ವಿದ್ಯುತ್ ಕಡಿತ, ಕಲ್ಲುತೂರಾಟದ ನಡುವೆಯೂ ಜೆಎನ್‌ಯುನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ
-

Photo: twitter.com/soniyaagrawal21
ಹೊಸದಿಲ್ಲಿ: ವಿದ್ಯುತ್ ಸಂಪರ್ಕ ಕಡಿತದಿಂದಾಗಿ ಕತ್ತಲು ಮತ್ತು ಕಲ್ಲುತೂರಾಟದ ನಡುವೆಯೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಮಂಗಳವಾರ, ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿತು. ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಹಲವು ಮಂದಿ ವಿದ್ಯಾರ್ಥಿಗಳು ವಿವಿಧ ಲ್ಯಾಪ್‌ಟಾಪ್‌ಗಳ ಮೂಲಕ ಚಿತ್ರ ವೀಕ್ಷಿಸಿದರು.
ಈ ಸಾಕ್ಷಚಿತ್ರ ಪ್ರದರ್ಶನ ಶಾಂತಿ ಮತ್ತು ಸಾಮರಸ್ಯಕ್ಕೆ ಧಕ್ಕೆ ತರುವ ಸಾಧ್ಯತೆ ಇದೆ ಎಂಬ ಕಾರಣ ನೀಡಿ, ಚಿತ್ರ ಪ್ರದರ್ಶನ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ವಿವಿ ಆಡಳಿತ ಸಲಹೆ ಮಾಡಿತ್ತು.
ಜೆಎನ್‌ಯುಎಸ್‌ಯು ಕಚೇರಿ ಟೆಫ್ಲಾಸ್‌ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಐಶ್ ಘೋಷ್, "ಒಂದು ಪರದೆಯನ್ನು ಮುಚ್ಚಬಹುದು. ಸಾವಿರಾರು ಇತರ ಪದರೆಗಳಲ್ಲಿ ನಾವು ಅದನ್ನು ವೀಕ್ಷಿಸುತ್ತೇವೆ" ಎಂದು ಹೇಳಿದರು.
ಈ ಸಾಕ್ಷ್ಯಚಿತ್ರ ಪ್ರದರ್ಶಕ್ಕೆ ಕೆಲವೇ ನಿಮಿಷಗಳ ಮುನ್ನ ಕ್ಯಾಂಪಸ್‌ನಾದ್ಯಂತ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದಾಗ್ಯೂ ವಿದ್ಯಾರ್ಥಿ ಸಂಘ ಕ್ಯೂಆರ್ ಕೋಡ್‌ಗಳನ್ನು ಹಂಚಿಕೊಳ್ಳುವ ಮೂಲಕ ಸಂಘದ ಕಚೇರಿಯ ಹೊರಗೆ ಲ್ಯಾಪ್‌ಟಾಪ್‌ಗಳಲ್ಲಿ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಅನುಕೂಲ ಮಾಡಿಕೊಟ್ಟಿತು.
"ಈ ದೇಶ ಪ್ರಜಾಪ್ರಭುತ್ವದ ಪರವಾಗಿ ನಿಲ್ಲುತ್ತದೆ ಹಾಗೂ ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ಇಲ್ಲಿ ಸಂಭ್ರಮಿಸಲಾಗುತ್ತದೆ ಎನ್ನುವುದು ನಮ್ಮ ನಂಬಿಕೆ. ಈ ನಿಲುವು ತೆಗೆದುಕೊಂಡು, ವಿದ್ಯುತ್ ಕಡಿತ ಸಂಪರ್ಕದ ಮೂಲಕ ನಮ್ಮ ಸ್ಫೂರ್ತಿಗೆ ಧಕ್ಕೆ ತರಲು ಅವರು ಯತ್ನಿಸಿದರು ಹಾಗೂ ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನ ಮಾಡಿದರು. ಜೆಎನ್‌ಯು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಬಹುದು ಎಂದು ನೀವು ಯೋಚಿಸಿದರೆ, ಅದು ಸಾಧ್ಯವಾಗದು" ಎಂದು ಘೋಷ್ ವಿವರಿಸಿದರು.
ಏತನ್ಮಧ್ಯೆ ಚಿತ್ರ ವೀಕ್ಷಣೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಗುರಿ ಮಾಡಿ ಇಟ್ಟಿಗೆ ತುಂಡುಗಳನ್ನು ಎಸೆಯಲಾಯಿತು. ವಿದ್ಯಾರ್ಥಿ ಗುಂಪುಗಳ ನಡುವಿನ ಸಂಘರ್ಷದ ಮಧ್ಯೆಯೇ, ಜೆಎನ್‌ಯುಎಸ್‌ಯು ವಿವಿಯ ಮುಖ್ಯದ್ವಾರದ ಬಳಿಗೆ ಪಾದಯಾತ್ರೆ ಕೈಗೊಂಡಿತು. ರಾತ್ರಿ 11 ಗಂಟೆಯವರೆಗೂ ವಿದ್ಯುತ್ ಸಂಪರ್ಕ ಕಡಿಗೊಳಿಸಿದ್ದರಿಂದ ಮುಖ್ಯದ್ವಾರದ ಬಳಿ ಸುರಕ್ಷಿತ ಎಂದು ವಿದ್ಯಾರ್ಥಿಗಳು ಭಾವಿಸಿದರು.
After Students Assn announced that #BBCDocumentary will be screened in JNU, the power has been suspended. Following that now students have circulated QR code to download the documentary on their mobile phones. pic.twitter.com/b5UMYyAoYk
— Mugilan Chandrakumar (@Mugilan__C) January 24, 2023
JNSU president @aishe_ghosh circulated QR code after the power supply cut down at JNU. #BBCDocumentary pic.twitter.com/z53rZikKcP
— Sunny Pratap (@sunnypratap02) January 24, 2023
JNU Administration has snapped the internet & electricity inside the campus to stop screening of #BBCDocumentary. This could not stop students from watching this, they now using own devices & mobiles to watch it together.#JNUSU
— RAHUL (@RahulCh47540438) January 24, 2023
You can't stop youth.
We are not your Slaves. ✊ pic.twitter.com/r3RiYCcqwB
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.