ಬಹಿಷ್ಕಾರದ ಕರೆಯ ನಡುವೆಯೂ ವ್ಯಾಪಕ ಮೆಚ್ಚುಗೆ ಪಡೆದ 'ಪಠಾಣ್'
-

ಮುಂಬೈ: ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ಪಠಾಣ್ ಅಂತಿಮವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಿರೀಕ್ಷೆಯಂತೆ, ಚಿತ್ರವು ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದ್ದು, ದೇಶಾದ್ಯಂತ ಹಲವಾರು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಆಗುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಲಪಂಥೀಯರ ಬಹಿಷ್ಕಾರದ ಕರೆಯ ನಡುವೆಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪಠಾಣ್ ಚಿತ್ರವು ಕೇವಲ ಭಾರತದಲ್ಲಿ ಮಾತ್ರವೇ ಮೊದಲ ದಿನದಂದು 40 ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಗಳಿಸುವ ನಿರೀಕ್ಷೆಯಿದೆ.
ನಿರ್ಮಾಪಕ ಮತ್ತು ಚಲನಚಿತ್ರ ವ್ಯವಹಾರ ತಜ್ಞ ಗಿರೀಶ್ ಜೋಹರ್ ಪ್ರಕಾರ ಪಠಾಣ್ ಚಿತ್ರವು ವಾರಾಂತ್ಯದಲ್ಲಿ 300 ಕೋಟಿಗೂ ಅಧಿಕ ವ್ಯವಹಾರ ನಡೆಸಲಿದೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
“ಓಪನಿಂಗ್ ಟ್ರೆಂಡಿಂಗ್ ತುಂಬಾ ವಿಸ್ತಾರವಾಗಿದೆ. ಇದೊಂದು ಅದ್ಭುತ ಆರಂಭ. ರಜಾದಿನವಲ್ಲದ ದಿನದಲ್ಲಿ ಬಿಡುಗಡೆಯಾಗಿದ್ದರೂ ಇದು (ಪಠಾಣ್) ಅತಿ ಹೆಚ್ಚು-ಟ್ರೆಂಡಿಂಗ್ ಆಗಿದೆ. (ನಿಖರವಾದ) ಸಂಖ್ಯೆಗಳು ಇನ್ನೂ ಬರಬೇಕಿದೆ. ಸದ್ಯಕ್ಕೆ ಮೊದಲನೇ ದಿನದಲ್ಲಿ 40 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದ್ದೇನೆ. ಸಂಜೆ ಮತ್ತು ತಡರಾತ್ರಿಯ ಪ್ರದರ್ಶನಗಳ ಬಳಿಕ ಅಂಕಿ ಸಂಖ್ಯೆಗಳು ಬರಲಿದೆ” ಎಂದು ಅವರು ಹೇಳಿದ್ದಾರೆ.
"ಜನವರಿ 26 ರಂದು (ಗಣರಾಜ್ಯೋತ್ಸವದ ರಜೆ) ಪಠಾಣ್ ಚಿತ್ರಕ್ಕೆ ಇನ್ನಷ್ಟು ವೀಕ್ಷಕರು ಬರುವ ನಿರೀಕ್ಷೆ ಇದೆ. ಚಿತ್ರವು ಮೊದಲ ಐದು ದಿನಗಳಲ್ಲಿ (ಮೊದಲ ವಾರಾಂತ್ಯದಲ್ಲಿ) ವಿಶ್ವಾದ್ಯಂತ 300 ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಕೇವಲ ಭಾರತದಲ್ಲಿ ಮಾತ್ರ 200 ಕೋಟಿಗೂ ಅಧಿಕ ವ್ಯವಹಾರ ಮಾಡಬಹುದು”ಎಂದು ಅವರು ಸೇರಿಸಿದ್ದಾರೆ.
ಚಿತ್ರೋದ್ಯಮದ ವ್ಯವಹಾರ ತಜ್ಞ ತರಣ್ ಆದರ್ಶ್ ಕೂಡಾ ಪಠಾಣ್ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದು, ಚಿತ್ರ ʼಬ್ಲಾಕ್ ಬಸ್ಟರ್ʼ ಎಂದು ಟ್ವೀಟ್ ಮಾಡಿದ್ದಾರೆ.
ಠುಸ್ ಪಠಾಕಿಯಾದ ಬಲಪಂಥೀಯರ ಬಾಯ್ಕಾಟ್ ಪ್ರಹಸನ
ಪಠಾಣ್ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳು ಬರುತ್ತಿದ್ದರೂ ಬಲಪಂಥೀಯರು ಚಿತ್ರವನ್ನು ಭಾರತವೇ ಬಹಿಷ್ಕರಿಸಿದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಸುದರ್ಶನ್ ಟಿವಿ ಸಂಪಾದಕ ಸುರೇಶ್ ಚವ್ಹಾಂಕೆ, ಸಾಧ್ವಿ ಪ್ರಾಚಿ, ಬಿಜೆಪಿ ಮುಖಂಡ ಅರುಣ್ ಯಾದವ್, ಯೋಗಿ ದೇವನಾಥ್ ಮೊದಲಾದವರು ಪಠಾಣ್ ವಿರುದ್ಧ ಬಹಿಷ್ಕಾರಕ್ಕೆ ಕರೆ ನೀಡಿದ್ದಾರೆ.
ಬಲಪಂಥೀಯರ ವಿರೋಧದ ತೀವ್ರತೆಯೂ ಜೋರಾಗಿದ್ದು, ಬೆಂಗಳೂರು ಸೇರಿದಂತೆ ಭಾರತದ ಹಲವೆಡೆ ಪಠಾಣ್ ಪ್ರದರ್ಶನಕ್ಕೆ ತಡೆ ಒಡ್ಡಿ ಪ್ರತಿಭಟನೆಗಳು ನಡೆದಿವೆ. ಇಂದೋರ್‌ನಲ್ಲಿ ಚಿತ್ರದ ಪ್ರದರ್ಶನವು ರದ್ದಾಗಿದೆ ಎಂದು ವರದಿಯಾಗಿದೆ. ಅದಾಗ್ಯೂ, ಇದು ಯಾವುದೂ ಚಿತ್ರದ ಗಳಿಕೆಗೆ ಯಾವುದೇ ನಷ್ಟವನ್ನು ಉಂಟು ಮಾಡಿಲ್ಲ ಎಂದು ಹೇಳಲಾಗಿದೆ.
ವರ್ಷಗಳ ಬಳಿಕ ತೆರೆ ಮೇಲೆ ಪೂರ್ಣ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿರುವ ಶಾರುಖ್ ಖಾನ್‌ರಿಗೆ ಚಿತ್ರಾಭಿಮಾನಿಗಳು ಭರ್ಜರಿ ಸ್ವಾಗತವನ್ನೇ ನೀಡಿದ್ದಾರೆ.
#Pathaan at national chains… Day 1… Update: 8.15 pm.#PVR: 11.40 cr#INOX: 8.75 cr#Cinepolis 4.90 cr
— munazirpotter (@munazirpotter) January 25, 2023
Total: ₹ 25.05 cr
SUPERB.
Note: Better than #War [₹ 19.67 cr], #TOH [₹ 18 cr] and #KGF [₹ 22.15 cr] - *entire day* numbers at multiplex chains. pic.twitter.com/ugHmpvJCjt
#Pathaan FDFS Kolkata
— Filmy imran Ali (@AliFilmy) January 25, 2023
pic.twitter.com/kTpnmoQJo8
#Pathaan at national chains… Day 1… Update: 8.15 pm. Total: ₹ 25.05 cr#PathanMovie #pathanreview #ShahRukhKhan #DeepikaPadukone https://t.co/UyLXoMVH5c
— Smriti Sharma (@SmritiSharma_) January 25, 2023
Absolute #KaranArjun moment relived. When @iamsrk and @BeingSalmanKhan came together onscreen, it spelt magic and nostalgia and also that the era of superstardom isn't over. #PathaanReview #ShahRukhKhan #salmankhan #pathaan #siddharthkannan #sidk pic.twitter.com/xAmnPkkQot
— Siddharth Kannan (@sidkannan) January 25, 2023
#OneWordReview...#Pathaan: BLOCKBUSTER.
— taran adarsh (@taran_adarsh) January 25, 2023
Rating: ½#Pathaan has it all: Star power, style, scale, songs, soul, substance and surprises… And, most importantly, #SRK, who’s back with a vengeance… Will be the first #Blockbuster of 2023. #PathaanReview pic.twitter.com/Xci1SN72hz
पूरा देश #पठान_का_बहिष्कार कर रहा है pic.twitter.com/aHm0l2u4U3
— Dr. Prachi Sadhvi (@Sadhvi_prachi) January 25, 2023
बिंदास बोल में आज #पठान_का_बहिष्कार पर विशेष कवरेज देखे। pic.twitter.com/vsbKibeACa
— Suresh Chavhanke “Sudarshan News” (@SureshChavhanke) January 25, 2023
दिल्ली में औंधे मुँह गिरी शाहरुख़ खान की पठान।
— Sagar Kumar “Sudarshan News” (@KumaarSaagar) January 25, 2023
ख़ाली पड़े है थिएटर।#पठान_का_बहिष्कार pic.twitter.com/RMgK5f83BG
Press Retweet Button If You Boycott Pathaan Film .
— Arun Yadav (@beingarun28) January 25, 2023
#पठान_का_बहिष्कार pic.twitter.com/XfUrcoquSO
धन्यवाद इंदौर पूरे देश से #पठान_का_बहिष्कार की खबरें आ रही है pic.twitter.com/BILCzuZ206
— Yogi Devnath (@YogiDevnath2) January 25, 2023
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.