Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗಮನ ಸೆಳೆಯುತ್ತಿರುವ 74ನೇ...

ಗಮನ ಸೆಳೆಯುತ್ತಿರುವ 74ನೇ ಗಣರಾಜ್ಯೋತ್ಸವದ ಗೂಗಲ್ ಡೂಡಲ್ ರಚಿಸಿದ ಕಲಾವಿದ ಪಾರ್ಥ್ ಕೊಥೆಕರ್ ಯಾರೆಂದು ಗೊತ್ತೆ?

26 Jan 2023 2:03 PM IST
share
ಗಮನ ಸೆಳೆಯುತ್ತಿರುವ 74ನೇ ಗಣರಾಜ್ಯೋತ್ಸವದ ಗೂಗಲ್ ಡೂಡಲ್ ರಚಿಸಿದ ಕಲಾವಿದ ಪಾರ್ಥ್ ಕೊಥೆಕರ್ ಯಾರೆಂದು ಗೊತ್ತೆ?

ಹೊಸ ದಿಲ್ಲಿ: 74ನೇ ಗಣರಾಜ್ಯೋತ್ಸವಕ್ಕಾಗಿ ಅಹಮದಾಬಾದ್ ಮೂಲದ ಕಲಾವಿದರೊಬ್ಬರು ರಚಿಸಿರುವ ಗೂಗಲ್ ಡೂಡಲ್ ಗೂಗಲ್ ಬಳಕೆದಾರರ ಗಮನ ಸೆಳೆಯುತ್ತಿದೆ. 74ನೇ ಗಣರಾಜ್ಯೋತ್ಸವದ ಡೂಡಲ್ ರಚಿಸಲು ಗೂಗಲ್ ಆಹ್ವಾನಿಸಿದ್ದ ಚಿತ್ರಗಳ ಪೈಕಿ ಅಹಮದಾಬಾದ್ ಮೂಲದ ಪಾರ್ಥ್ ಕೊಥೆಕರ್ ಎಂಬ ಕಲಾವಿದರ ಚಿತ್ರವು ಡೂಡಲ್ ಆಗಿ ಆಯ್ಕೆಯಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಗೂಗಲ್, ಕೊಥೆಕರ್ ಈ ಚಿತ್ರವನ್ನು ಕರಕುಶಲತೆಯ ಮೂಲಕ ಸೂಕ್ಷ್ಮವಾಗಿ ಪೇಪರ್ ಅನ್ನು ಕತ್ತರಿಸಿ ರಚಿಸಿದ್ದಾರೆ ಎಂದು ಹೇಳಿದೆ. ಈ ಚಿತ್ರವು ಅದ್ಭುತವಾದ ರಾಷ್ಟ್ರಪತಿ ಭವನವನ್ನು ಹಿನ್ನೆಲೆಯಾಗಿ ಹೊಂದಿದ್ದು, ಇದರೊಂದಿಗೆ ಗಣರಾಜ್ಯೋತ್ಸವ ಪರೇಡ್‌ನ ಹಲವಾರು ಇತರ ಸಂಗತಿಗಳನ್ನೂ ಒಳಗೊಂಡಿದೆ ಎಂದು hindustantimes.com ವರದಿ ಮಾಡಿದೆ.

ಪಾರ್ಥ್ ಕೊಥೆಕರ್ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹುಟ್ಟಿ ಬೆಳೆದವರಾಗಿದ್ದು, ಕತ್ತರಿಸಿದ ಪೇಪರ್‌ಗಳಿಂದ ಚಿತ್ರ ಕಲಾಕೃತಿಗಳನ್ನು ರಚಿಸುತ್ತಾರೆ. "ಈ ಚಿತ್ರ ಕಲಾಕೃತಿಗಳನ್ನು ಒಂದೇ ಪೇಪರ್ ಹಾಳೆ ಬಳಸಿಕೊಂಡು ಖುದ್ದು ನಾನೇ ಕೈಯಲ್ಲಿ ಕತ್ತರಿಸಿ, ನಂತರ ಅದರ ಮೇಲೆ ರೇಖಾಚಿತ್ರಗಳನ್ನು ಬಿಡಿಸಿ ತಯಾರಿಸುತ್ತೇನೆ" ಎಂದು ಪಾರ್ಥ್ ಕೊಥೆಕರ್ ವಿವರಿಸುತ್ತಾರೆ.

ಪಾರ್ಥ್ ಕೊಥೆಕರ್ ಅವರಿಗೆ ಯಾವುದೇ ಉನ್ನತ ವಿದ್ಯಾಭ್ಯಾಸದ ಹಿನ್ನೆಲೆ ಇಲ್ಲ. ಅವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಅನಿಮೇಷನ್ ಶಿಕ್ಷಣ ಪಡೆದಿದ್ದಾರೆ. ಈ ವಿಷಯವನ್ನು ಅವರೇ 2021ರಲ್ಲಿ Eat My News ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ತನಗೆ 2d ಚಿತ್ರ ಪ್ರಕಾರದಲ್ಲಿ ಆಸಕ್ತಿ ಇದ್ದರೂ, ಶಿಕ್ಷಣ ಸಂಸ್ಥೆ ಮಾತ್ರ ನನಗೆ 3d ಅನಿಮೇಷನ್ ಶಿಕ್ಷಣ ಪಡೆಯುವಂತೆ ಒತ್ತಡ ಹೇರಿದ್ದರಿಂದ ಮಧ್ಯದಲ್ಲೇ ಶಿಕ್ಷಣ ತೊರೆಯಬೇಕಾಯಿತು. ನಾನು ಶಿಕ್ಷಣ ತೊರೆದ ನಂತರ ಚಿತ್ರಗಳನ್ನು ಬಿಡಿಸಲೇ ನನ್ನ ಪೂರ್ಣ ಸಮಯ ಮೀಸಲಿಟ್ಟೆ ಎಂದು ಪಾರ್ಥ್ ಕೊಥೆಕರ್ ತಿಳಿಸಿದ್ದಾರೆ.

ಮೊದಮೊದಲು ಚಿತ್ರ ವಿನ್ಯಾಸ ಮಾಡುವುದು ಪಾರ್ಥ್ ಕೊಥೆಕರ್ ಪಾಲಿಗೆ ಹವ್ಯಾಸ ಮಾತ್ರವಾಗಿತ್ತು. ಹೀಗಿದ್ದೂ, ನಾನು ಸಾಕಷ್ಟು ಚಿತ್ರಗಳನ್ನು ರಚಿಸಿದ ನಂತರ, ಅಹಮದಾಬಾದ್‌ನ ಕನೋರಿಯಾ ಚಿತ್ರಕಲಾ ಕೇಂದ್ರದಲ್ಲಿ ಚಿತ್ರ ಪ್ರದರ್ಶನ ಏರ್ಪಡಿಸಿ, 84ಕ್ಕೂ ಹೆಚ್ಚು ಕಲಾಕೃತಿಗಳನ್ನು ಪ್ರದರ್ಶಿಸಿದೆ ಎನ್ನುತ್ತಾರೆ ಅವರು.

ಅವರ ಕಲಾಕೃತಿಗಳನ್ನು ಅಡೋಬ್ ಮಾಲೀಕತ್ವದ ಸಾಮಾಜಿಕ ಮಾಧ್ಯಮ ವೇದಿಕೆಯಾದ ಬಿಹಾನ್ಸ್ ಬಳಸಿಕೊಂಡಿದ್ದು, ಮತ್ತಿತರ ಕಲಾಕೃತಿಗಳು ಲಂಡನ್‌ನ ರಾಷ್ಟ್ರೀಯ ಇತಿಹಾಸ ಸಂಗ್ರಹಾಲಯದಲ್ಲಿ ಪ್ರದರ್ಶನಗೊಂಡಿವೆ. ಇದಲ್ಲದೆ, 2016ರಲ್ಲಿ ನ್ಯೂಜಿಲೆಂಡ್ ಸರ್ಕಾರವು ನನ್ನ ಕಲಾಕೃತಿಗಳನ್ನು ಆ ದೇಶದಲ್ಲಿ ಪ್ರದರ್ಶಿಸಲು ನನಗೆ ಆಹ್ವಾನ ನೀಡಿತ್ತು ಎಂದು ತಮ್ಮ ಅಂತರ್ಜಾಲ ತಾಣದಲ್ಲಿ ಪಾರ್ಥ್ ಕೊಥೆಕರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಾಜ್ಯದ ಮೂವರು ಮಹಿಳಾ ಸಾಧಕರ ಸಾಧನೆಗಳನ್ನು ಅನಾವರಣಗೊಳಿಸಿದ ಕರ್ನಾಟಕದ ಸ್ತಬ್ಧಚಿತ್ರ

share
Next Story
X