ಕಾಶ್ಮೀರದಲ್ಲಿ ಹಿಮಪಾತಕ್ಕೆ ಇಬ್ಬರು ಬಲಿ, ಹಲವರು ನಾಪತ್ತೆಯಾಗಿರುವ ಸಾಧ್ಯತೆ: ವರದಿ
ಶ್ರೀನಗರ: ಕಾಶ್ಮೀರದ ಗುಲ್ಮಾರ್ಗ್ ಸ್ಕೀ ರೆಸಾರ್ಟ್ ಬಳಿ ಹಿಮಪಾತವಾಗಿದ್ದು ಇಬ್ಬರು ಸಾವನ್ನಪ್ಪಿದ್ದು, ಕೆಲವರು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
"ಗುಲ್ಮಾರ್ಗ್ನ ಪ್ರಸಿದ್ಧ ಸ್ಕೀ ರೆಸಾರ್ಟ್ನಲ್ಲಿ ಭಾರಿ ಹಿಮಕುಸಿತ ಸಂಭವಿಸಿದಾಗ ಶಬ್ದಗಳು ಕೇಳಿಬಂದಿದ್ದು, ಪ್ರವಾಸಿಗರು ಓಡುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಬಾರಾಮುಲ್ಲಾ ಪೊಲೀಸರು ಇತರ ಏಜೆನ್ಸಿಗಳೊಂದಿಗೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ" ಎಂದು ಬಾರಾಮುಲ್ಲಾ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಜನವರಿ 29 ರಂದು ಲಡಾಖ್ನ ಕಾರ್ಗಿಲ್ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತಕ್ಕೆ ಸಿಲುಕಿದ ಮಹಿಳೆ ಹಾಗೂ ಹದಿಹರೆಯದ ಹುಡುಗಿ ಸಾವನ್ನಪ್ಪಿದ್ದರು.
Next Story