ಪರೀಕ್ಷಾ ಕೊಠಡಿಯಲ್ಲಿ 500ಕ್ಕೂ ಹೆಚ್ಚು ಬಾಲಕಿಯರನ್ನು ಕಂಡು ತಲೆಸುತ್ತಿ ಬಿದ್ದ ಬಾಲಕ: ಆಸ್ಪತ್ರೆಗೆ ದಾಖಲು

ಪಾಟ್ನಾ: 12ನೇ ತರಗತಿಯ ವಿದ್ಯಾರ್ಥಿಯೋರ್ವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲೆಂದು ತೆರಳಿ ಬಳಿಕ ತಲೆಸುತ್ತಿ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ಆದರೆ ತಲೆಸುತ್ತು ಬಂದ ಕಾರಣ ಸದ್ಯ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಕೊಠಡಿ ತುಂಬಾ 500ರಷ್ಟು ವಿದ್ಯಾರ್ಥಿನಿಯರೇ ಇದ್ದು, ತಾನು ಓರ್ವನೇ ವಿದ್ಯಾರ್ಥಿಯೆಂದು ತಿಳಿದ ಕೂಡಲೇ ಆತ ಭಯಬಿದ್ದು ಪ್ರಜ್ಞೆ ತಪ್ಪಿದ್ದಾನೆ ಎಂದು ಆತನ ಕುಟುಂಬವನ್ನು ಉಲ್ಲೇಖಿಸಿ news18 ವರದಿ ಮಾಡಿದೆ.
ಶರೀಫ್ ಅಲ್ಲಾಮಾ ಇಕ್ಬಾಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶಂಕರ್ ಎಂಬ ವಿದ್ಯಾರ್ಥಿ ಅಲ್ಲಿನ ಬ್ರಿಲಿಯಂಟ್ ಶಾಲೆಗೆ ಮಧ್ಯಂತರ ಪರೀಕ್ಷೆ ಬರೆಯಲು ತೆರಳಿದ್ದ. ಕೊಠಡಿ ತುಂಬಾ ವಿದ್ಯಾರ್ಥಿನಿಯರನ್ನು ಕಂಡು ಆತ ಮೂರ್ಛೆಹೋಗಿದ್ದು ಮಾತ್ರವಲ್ಲದೆ, ಆತನಿಗೆ ಜ್ವರವೂ ಕಾಣಿಸಿಕೊಂಡಿತು ಮತ್ತು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ‘‘ಪರೀಕ್ಷಾ ಕೇಂದ್ರಕ್ಕೆ ಹೋಗಿ ನೋಡಿದಾಗ ರೂಮಿನ ತುಂಬ ಹುಡುಗಿಯರೇ ತುಂಬಿ ತುಳುಕುತ್ತಿದ್ದರು, ಕೂಡಲೇ ಭಯಗೊಂಡು, ಅದರ ಬೆನ್ನಲ್ಲೇ ಜ್ವರ ಬಂದು ಮೂರ್ಛೆ ಹೋದನು’’ ಎಂದು ಶಂಕರ್ ನ ಚಿಕ್ಕಮ್ಮ ಹೇಳಿದ್ದಾರೆ.
ಶಂಕರ್ ನ ಚಿಕ್ಕಮ್ಮ ಆಸ್ಪತ್ರೆಯಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವೀಡಿಯೊ ಆನ್‌ಲೈನ್ ನಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ ಬಾಲಕನ ಗಾಯದ ಪ್ರಮಾಣವು ಅಸ್ಪಷ್ಟವಾಗಿದ್ದು, ಮೂರ್ಛೆ ತಪ್ಪಿ ಬಿದ್ದ ವೇಳೆ ಆತನ ಕೈ ಮುರಿದಿದೆ ಎಂದು ಹೇಳಿದರು.
अजब-गजब! नालंदा में बिहार बोर्ड 12वीं की परीक्षा के दौरान एक छात्र को 500 लड़कियों के बीच बैठा दिया गया. नतीजा देखिए- लड़का बेहोश हो गया. नर्वस होकर गिर गया. परीक्षार्थी मनीष शंकर को अस्पताल लाना पड़ा...नालंदा से अमृतेश की रिपोर्ट.Edited by @iajeetkumar pic.twitter.com/cJTmaLcfmi
— Prakash Kumar (@kumarprakash4u) February 1, 2023







