7,000 ಉದ್ಯೋಗಗಳನ್ನು ಕಡಿತಗೊಳಿಸಲು ಮುಂದಾದ ಡಿಸ್ನಿ ಕಂಪನಿ
ಹೊಸದಿಲ್ಲಿ: ಸಮೂಹ ಮಾಧ್ಯಮ ಮತ್ತು ಮನರಂಜನಾ ಸಮೂಹ ಡಿಸ್ನಿ ಕಂಪನಿಯಾದ್ಯಂತ ವೆಚ್ಚವನ್ನು ಕಡಿತಗೊಳಿಸಲು 7,000 ಉದ್ಯೋಗಗಳನ್ನು ಕಡಿತಗೊಳಿಸಲು ಯೋಜಿಸುತ್ತಿರುವುದಾಗಿ ಹೇಳಿದೆ.
ಸ್ಟ್ರೀಮಿಂಗ್ ಚಂದಾ ಸೇವೆಯಲ್ಲಿ ಇಳಿಕೆ, ವೆಚ್ಚ ಕಡಿತ ಹಾಗೂ ನಿರ್ವಹಣೆ ಹಾಗೂ ಸಂಸ್ಥೆಯ ಪುನಾರಚನೆಯ ಭಾಗವಾಗಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕಂಪನಿಯ ಸಿಇಒ ಬಾಬ್ ಇಗರ್ ಹೇಳಿದ್ದಾರೆ.
ವಾಲ್ಟ್ ಡಿಸ್ನಿ ಹೂಡಿಕೆಯ ಕಂಪನಿಯು ಬಿಡುಗಡೆ ಮಾಡಿದ ಕಳೆದ ತ್ರೈಮಾಸಿಕ ವರದಿಯಲ್ಲಿ ಚಂದದಾರಿಕೆಯಲ್ಲಿ ಇಳಿಕೆ ಉಂಟಾಗಿದೆ ಎಂದು ಹೇಳಿದೆ.
ನೆಟ್ ಫ್ಲಿಕ್ಸ್ ಗೆ ಪ್ರತಿ ಸ್ಪರ್ಧಿಯಾಗಿರುವ ಡಿಸ್ನಿ ಪ್ಲಸ್ ಮೂರು ತಿಂಗಳ ಹಿಂದಿನದಕ್ಕೆ ಹೋಲಿಸಿದರೆ ಶೇ.1ರಷ್ಟು ಇಳಿಕೆ ಕಂಡಿದೆ. ಡಿಸೆಂಬರ್ 31ಕ್ಕೆ 161.8 ದಶಲಕ್ಷ ಗ್ರಾಹಕರನ್ನು ಹೊಂದಿದೆ.
ಸ್ಟ್ರೀಮಿಂಗ್ ವೇದಿಕೆ ಲಾಭದಾಯಕವೆನಿಸಿಲ್ಲ. ವೆಚ್ಚ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ ಎಂದು ಸಂಸ್ಥೆ ಹೇಳಿದೆ.
2021ರ ವಾರ್ಷಿಕ ವರದಿ ಪ್ರಕಾರ ಡಿಸ್ನಿ ಸಂಸ್ಥೆಯಲ್ಲಿ ಜಗತ್ತಿನಾದ್ಯಂತ 1,90,000 ಮಂದಿ ಕೆಲಸ ಮಾಡುತ್ತಿದ್ದಾರೆ ಈ ಪೈಕಿ. ಶೇ.80ರಷ್ಟು ಮಂದಿ ಖಾಯಂ ಆಗಿದ್ದಾರೆ.