ಹಳಿ ದಾಟುತ್ತಿದ್ದಾಗ ರೈಲಿನಡಿ ಬಿದ್ದ ಮಹಿಳೆ ಅದೃಷ್ಟವಶಾತ್ ಪಾರು!
ಗಯಾ: ಬಿಹಾರದ ಗಯಾದಲ್ಲಿ ಶುಕ್ರವಾರ ಮಹಿಳೆಯೊಬ್ಬರು ರೈಲು ಹಳಿ ದಾಟುತ್ತಿದ್ದಾಗ ನಿಂತಿದ್ದ ರೈಲು ಹಠಾತ್ತನೆ ಚಲಿಸಲು ಆರಂಭಿಸಿದ ಪರಿಣಾಮ ರೈಲಿನಡಿ ಬಿದ್ದು ಗಾಯದೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಯಾದ ಟಂಕುಪ್ಪಾ ರೈಲು ನಿಲ್ದಾಣದಲ್ಲಿ ಈ ಘಟನೆ ವರದಿಯಾಗಿದೆ.
ಪ್ಲಾಟ್ಫಾರ್ಮ್ನ ಇನ್ನೊಂದು ಬದಿಯಿಂದ ಮತ್ತೊಂದು ರೈಲನ್ನು ಹತ್ತುವ ಉದ್ದೇಶದಿಂದ ಮಹಿಳೆ ಹಳಿ ದಾಟಲು ಮುಂದಾದರು.
ರೈಲು ಚಲಿಸಲು ಆರಂಭಿಸಿದ ಬಳಿಕ ಮಹಿಳೆ ಹಿಡಿತ ಕಳೆದುಕೊಂಡು ಕೆಳಗೆ ಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆ ಅಲುಗಾಡದೆ ಶಾಂತವಾಗಿ ಟ್ರ್ಯಾಕ್ ಮೇಲೆ ಮಲಗಿದ್ದಾಗ ರೈಲು ಹಾದು ಹೋಗುವುದು ಕಂಡುಬಂದಿದೆ.
ಮಹಿಳೆ ಬಿದ್ದಿರುವುದನ್ನು ಕಂಡ ಕೆಲ ಪೊಲೀಸರು ಧಾವಿಸಿ ಆಕೆಯನ್ನು ಹಳಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು.
ತಲೆಗೆ ಗಾಯಗೊಂಡಿರುವ ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Video: Woman Falls Under Moving Train, Here's What Happened Next https://t.co/ryQiehoWtx pic.twitter.com/1yzhh1skot
— NDTV (@ndtv) February 11, 2023